ಬೆಂಗಳೂರು : ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2020 ಹಾಗೂ 2021 ನೇ ಸಾಲಿನ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ರಾಜ್ಯ ಸರ್ಕಾರದಿಂದ ವಾಲ್ಮೀಕಿ ಜಯಂತಿಯಂದು ನೀಡಲಾಗುವಂತ ವಾಲ್ಮೀಕಿ ಪ್ರಶಸ್ತಿಯನ್ನು ಘೋಷಿಸಿದೆ. 2020ನೇ ಸಾಲಿಗೆ ಐದು ಸಾಧಕರು ಹಾಗೂ 2021ನೇ ಸಾಲಿಗೆ ಆರು ಸಾಧಕರು ಸೇರಿದಂತೆ 11 ಸಾಧಕರಿಗೆ ಈ ಬಾರಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
2020 ನೇ ಸಾಲಿನಲ್ಲಿ ವಾಲ್ಮೀಕಿ ಪ್ರಶಸ್ತಿ ಪಡೆದವರು : ಡಾ.ಕೆ.ಆರ್. ಪಾಟೀಲ್, ಡಾ.ಬಿ. ಎಲ್.ವೇಣು, ಗೌರಿ ಕೊರಗ, ಮಾರಪ್ಪ ನಾಯಕ, ಸಿರಿಗೆರೆ ತಿಪ್ಪೇಶ್
2021ನೇ ಸಾಲಿನಲ್ಲಿ ವಾಲ್ಮೀಕಿ ಪ್ರಶಸ್ತಿ ಪಡೆದವರು : ಕೆ.ಸಿ.ನಾಗರಾಜು, ಲಕ್ಷ್ಮಿ ಗಣಪತಿ ಸಿದ್ದಿ, ಪ್ರೊ.ಎಸ್.ಆರ್.ನಿರಂಜನ, ಭಟ್ರಹಳ್ಳಿ ಗೂಳಪ್ಪ, ಅಶ್ವತ್ಥ ರಾಮಯ್ಯ, ಜಂಭಯ್ಯ ನಾಯಕರಿಗೆ ಪ್ರಶಸ್ತಿ ನೀಡಲಾಗಿದೆ.