ಅಮೆರಿಕಾ: ತನಗೆ ಮುತ್ತು ಕೊಡೆಂದು ಕೇಳಿದಾಗ ಆತ ನಿರಾಕರಿಸಿದ ಎನ್ನುವ ಕಾರಣಕ್ಕೆ 28 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಗುಂಡಿಟ್ಟು ಕೊಂದಿರುವ ಘಟನೆ ಅಮೆರಿಕದ ಇಲಿನೋಯಿಯಲ್ಲಿ ನಡೆದಿದೆ. ಸಧ್ಯ ಆಕೆಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯ ಹೆಸರು ಕ್ಲಾಡಿಯಾ ರೆಸೆಂಡಿಜ಼್-ಫ್ಲೋರೆಸ್.
ಈಕೆ ತನ್ನಿಬ್ಬರು ಗೆಳೆಯರೊಂದಿಗೆ ನೈಟ್ ಔಟ್ ನಲ್ಲಿ ಭಾಗಿಯಾಗಿದ್ದಳು. ತಾನು ಆಗ ತಾನೇ ವಾಸಿಸಲು ಬಂದಿದ್ದ ಆಪಾರ್ಟ್ಮೆಂಟ್ ನಲ್ಲಿದ್ದ ಜೋಡಿ ಈಕೆಯೊಂದಿಗೆ ಪಾರ್ಟಿ ಮಾಡಿದ್ದಾರೆ.
ಈ ಬಳಿಕ ರೆಸೆಂಡಿಜ಼್ ತನಗೊಂದು ಮುತ್ತು ಕೊಡು ಎಂದು ಜೇಮ್ಸ್ ಜೋನ್ಸ್ ಗೆ ಕೇಳಿಕೊಂಡಿದ್ದಾಳೆ. ಇದಕ್ಕೆ ಜೇಮ್ಸ್ ನಿರಕರಿಸಿ ತನ್ನ ಗರ್ಲ್ ಫ್ರೆಂಡ್ ಗೆ ಮುತ್ತು ಕೊಟ್ಟಿದ್ದಾನೆ. ಇದರಿಂದ ಹೊಟ್ಟೆ ಕಿಚ್ಚಿಗೆ ಬಿದ್ದ ರೆಸೆಂಡಿಜ಼್ ಮೇಲೆ ಬಿದ್ದು ಮುತ್ತು ನೀಡಲು ಮತ್ತೊಮ್ಮೆ ಕೇಳಿದ್ದಾಳೆ.
ಇದಕ್ಕೆ ಜೋನ್ಸ್ ಒಪ್ಪದೇ ನಿರಾಕರಿಸಿದ್ದಾನೆ. ಕೂಡಲೇ ಕೌಚ್ ಕುಶನ್ ಗಳ ನಡುವೆ ಇದ್ದ ಆತನ ಪಿಸ್ತೂಲ್ ಪಡೆದುಕೊಂಡು ಆತನಿಗೇ ಗುರಿಯಿಟ್ಟು ಶೂಟ್ ಮಾಡಿದ್ದಾಳೆ. ಕೂಡಲೇ ಜೇಮ್ಸ್ ಗರ್ಲ್ ಫ್ರೆಂಡ್ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರೆಸೆಂಡೆಜ಼್ ಳನ್ನು ಅರೆಸ್ಟ್ ಮಾಡಿದ್ದಾರೆ.