Ad Widget .

ವರ್ಷ ಹಲವಾದರೂ ಮದುವೆಯಾಗದ ಸಂಸದೆ ಕುರಿತು ಚೈತ್ರಾ ಕುಂದಾಪುರ ಯಾಕೆ ಪ್ರಶ್ನೆ ಕೇಳಲ್ಲ – ಮಾಜಿ ಶಾಸಕ ಶಕುಂತಳಾ ಶೆಟ್ಟಿ

Ad Widget . Ad Widget .

ಮಂಗಳೂರು: ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಂಟ ಸಮುದಾಯದ ಹುಡುಗಿಯ ಬಗ್ಗೆ ಮಾತನಾಡುವ ಚೈತ್ರಾ ಕುಂದಾಪುರ ನಿಮ್ಮದೇ ಕ್ಷೇತ್ರದ ಸಂಸದೆ ಜೊತೆಗೆ ನನ್ನ ಊರಿನ ಹೆಣ್ಣು ಮಗಳು ಶೋಭಾ ಕರಂದ್ಲಾಜೆಗೆ 55 ವರ್ಷ ಪ್ರಾಯ ಆದ್ರೂ ಮದುವೆ ಆಗದ ಕುರಿತು ನೀವು ಯಾಕೆ ಪ್ರಶ್ನೆ ಎತ್ತಿಲ್ಲ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ.

Ad Widget . Ad Widget .

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ ಸಮುದಾಯದವರು ಪಕ್ಷದ ರಾಜ್ಯಾಧ್ಯಕ್ಷರಾಗಿರುವಾಗ, ಆಕೆ ಭಾಷಣ ಮಾಡಿದ ಜಾಗದಲ್ಲಿ ಬಂಟ ಸಮುದಾಯ ಪ್ರತಿನಿಧಿ ಶಾಸಕರಾಗಿರುವಾಗ, ಬಂಟ ಸಮುದಾಯದ ಹೆಣ್ಣು ಮಗಳನ್ನು ಅವಮಾನಿಸಲು ಅವರೇ ಕುಮ್ಮಕ್ಕು ನೀಡಿದ್ದರೇ ಎಂಬುದನ್ನು ಸ್ಪಷ್ಟಪಡಿಸಬೇಕು.

ಇನ್ನೊಬ್ಬರ ಹೆಣ್ಣು ಮಕ್ಕಳ ಬಗ್ಗೆ ಎಲ್ಲಿಂದಲೋ ಬಂದು ಸುರತ್ಕಲ್‌ನಲ್ಲಿ ಮಾತನಾಡಲು ನಿಮಗೆ ಆ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರು ಹೇಳಿರುವರೇ? ಅಥವಾ ಅವರ ವಿರೋಧಿ ಬಣದವರು ಹೇಳಿದ್ದಾರೆಯೇ ಎಂಬುದನ್ನು ಹೇಳಿ. ಮೊದಲು ಹಿಂದೂ ಧರ್ಮ ಬಗ್ಗೆ ತಿಳಿದು ಮಾತನಾಡಿ. ಹೆಣ್ಣು ಮಗಳನ್ನು ಅಮಾನಿಸುವುದು ಹಿಂದೂ ಸಂಸ್ಕೃತಿ ಅಲ್ಲ ಎಂದು ಶಕುಂತಳಾ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ನೀವು ಸರಿ ಇದ್ದೀರಾ ಆದರೆ ಆ ಹುಡುಗಿಯನ್ನು ಪ್ರೀತಿಸುವ ಮುಸ್ಲಿಂ ಯಾರು ಅಂತ ತಿಳಿಸಿಕೊಡಿ ಇಲ್ಲಾ ಸಾರ್ವಜನಿಕವಾಗಿ ಹೆಣ್ಣುಮಕ್ಕಳ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ನೀವೂ ಒಂದು ಹೆಣ್ಣು ನೀವು ಯಾವಾಗ ಮದುವೆಯಾಗುತ್ತೀರಾ ಹೇಳಿ. ನಿಮ್ಮ ಮದುವೆಗೆ ನಾವೆಲ್ಲ ಬರುತ್ತೇವೆ. ನೀವು ಯಾರನ್ನು, ಯಾವಾಗ ಎಷ್ಟು ವರ್ಷದ ಒಳಗೆ ಮದುವೆಯಾಗುತ್ತೀರಿ ಎಂದು ಘೋಷಿಸಿ ಬಿಡಿ. ಅದು ಬಿಟ್ಟು ಇನ್ನೊಬ್ಬರ ಮಕ್ಕಳಿಗೆ ನೀವು ಬೆಲೆ ಕಟ್ಟುವ ಅಗತ್ಯ ಇಲ್ಲ ಎಂದರು.

Leave a Comment

Your email address will not be published. Required fields are marked *