Ad Widget .

ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟರ್ – ವಿವಾದಾತ್ಮಕ ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್

Ad Widget . Ad Widget .

ಹುಬ್ಬಳ್ಳಿ: ‘ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್. ಡ್ರಗ್ ಪೆಡ್ಲರ್’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Ad Widget . Ad Widget .

ಹುಬ್ಬಳ್ಳಿಯಲ್ಲಿ ನಡೆದ ವಿಧಾನಸಭೆ ಚುನಾವಣೆ ಪೂರ್ವ ಸಿದ್ಧತೆ ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್ ಕುಮಾರ್, ‘ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್ , ಡ್ರಗ್ ಪೆಡ್ಲರ್ ಅಂತ ವರದಿಯಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಜೈಲಿಗೆ ಹೋಗಿ ಬಂದಿದ್ದಾರೆ. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದರಾ? ಇಲ್ಲಾ ಸ್ವಾತಂತ್ರ್ಯ ಸಂಗ್ರಾಮದ ಕಥೆ ಬರೆಯಲು ಜೈಲಿಗೆ ಹೋಗಿ ಕುಳಿತಿದ್ದರಾ? ಇಂಥವರೆಲ್ಲ ಪ್ರಧಾನಿ ಮೋದಿಯನ್ನು ಟೀಕಿಸುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ದೇಶದ ಸಂವಿಧಾನದ ಮೇಲೆ ನಂಬಿಕೆ ಕಳಕೊಂಡಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರು ಎಂದು ಕೇಳಿ.. ಕಾಂಗ್ರೆಸ್ ಅಧ್ಯಕ್ಷರಾಗಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯೇ ಪೈಪೋಟಿ ನಡೆಸುತ್ತಿದ್ದಾರೆ. ಇವರಿಗೆ ಪಕ್ಷ ನಡೆಸೋಕೆ ಆಗುತ್ತಿಲ್ಲ. ಇನ್ನು ದೇಶ ಮುನ್ನಡೆಸಲು ಸಾಧ್ಯವೇ ಎಂದು ನಳಿನ್ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೋಡೆತ್ತು ಎನ್ನುತ್ತಾರೆ. ಆದರೆ, ಇವರ ಸ್ಥಿತಿ ಹೇಗಿದೆ ಅಂದ್ರೆ ಒಳಗೊಳಗೇ ಕುಸ್ತಿ ಆಡುತ್ತಾರೆ. ಕಾಂಗ್ರೆಸ್ ನಾಯಕರ ಪಿಸುಮಾತಿನಲ್ಲಿಯೇ ಇವರ ಜಗಳ ರಟ್ಟಾಗಿತ್ತು. ಉಗ್ರಪ್ಪ ಎಂದೂ ಪಿಸುಮಾತು ಆಡಿದವರಲ್ಲ. ಆದರೆ, ಸಿದ್ದರಾಮಯ್ಯ ಕುತಂತ್ರದಿಂದಾಗಿ ಉಗ್ರಪ್ಪ ಪಿಸುಮಾತು ಆಡುವಂತಾಗಿದೆ. ಒಳಗಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ಇವರು ಮುಂದಿನ ಚುನಾವಣೆ ಹೊತ್ತಲ್ಲಿ ಪಕ್ಷವನ್ನು ಗೆಲ್ಲಿಸುವುದಲ್ಲ. ಪಕ್ಷವನ್ನೇ ಎರಡು ಹೋಳಾಗಿ ವಿಭಜಿಸಲಿದ್ದಾರೆ ಎಂದು ಹೇಳಿದರು.

Leave a Comment

Your email address will not be published. Required fields are marked *