Ad Widget .

45ರ ವರ, 25ರ ವಧು..! ವೈರಲ್ ಆಗ್ತಾ‌ ಇದೆ ಈ ಜೋಡಿಯ ಫೋಟೋ|

ತುಮಕೂರು: ಮದುವೆಯನ್ನ ದೇವರು ಸ್ವರ್ಗದಲ್ಲೇ ನಿಶ್ಚಯ ಮಾಡುತ್ತಾನೆ ಅನ್ನೊ ಮಾತಿದೆ. ಋಣ ಸಂಬಂಧ ಇದ್ದರೆ ಎಲ್ಲೇ ಇದ್ದರೂ, ಹೇಗಾದರೂ ಒಂದಾಗುತ್ತಾರೆ ಅನ್ನೋ ಮಾತುಗಳು ಕೂಡ ಇವೆ. ಅದೇ ರೀತಿ ಈ ಮಾತುಗಳು ನಿಜವೆಂಬಂತೆ 45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಯುವತಿ ಮದುವೆಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಎಂಬುವರ ಜೊತೆ ಮೇಘನಾ ಎಂಬ ಯುವತಿ ಮದುವೆಯಾಗಿದ್ದಾಳೆ. 45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಯುವತಿ ಮದುವೆಯಾಗಿರುವ ಫೋಟೋಗಳು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

Ad Widget . Ad Widget .

ಮೇಘನಾ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದು, ಈಕೆಗೆ ಬೇರೆಯವರ ಜೊತೆ ಮೊದಲೇ ಒಂದು ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪತಿ ಕಳೆದ ಎರಡು ವರ್ಷಗಳಿಂದ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಪತಿ ಎರಡು ವರ್ಷಗಳಿಂದ ಬಾರದ ಹಿನ್ನೆಲೆಯಲ್ಲಿ ಮೇಘನಾಳೇ ಹೋಗಿ 45 ವರ್ಷದ ವ್ಯಕ್ತಿಯನ್ನ ಮದುವೆಯಾಗಿದ್ದಾಳಂತೆ.

ಮೇಘನಾ ಸ್ವತಃ ಶಂಕರಣ್ಣ ಬಳಿ ಹೋಗಿ ಮದುವೆಯಾಗಿ ಅಂತಾ ಕೇಳಿಕೊಂಡಿದ್ದಾಳೆ. ಈ ವೇಳೆ ಇದುವರೆಗೂ ಮದುವೆಯಾಗದ ಶಂಕರಣ್ಣ ಯುವತಿಯನ್ನ ಒಪ್ಪಿ ಸಮೀಪದ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಇಬ್ಬರು ಮದುವೆಯಾಗಿರುವ ಫೋಟೋ ನೋಡಿ ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Leave a Comment

Your email address will not be published. Required fields are marked *