Ad Widget .

ತಡರಾತ್ರಿ ಮಂಗಳೂರಿನಲ್ಲಿ ಝಳಪಿಸಿದ ತಲ್ವಾರ್| ಹಿಂದೂ ಕಾರ್ಯಕರ್ತನ ಹತ್ಯೆಗೆ ವಿಫಲ ಯತ್ನ|

ಮಂಗಳೂರು: ಬೈಕಲ್ಲಿ ಹೊಂಚು ಹಾಕಿ ಕುಳಿತಿದ್ದ ಮೂವರು ಅಪರಿಚಿತರು ಬಿಜೆಪಿ ಪ್ರಮುಖನ ಮೇಲೆ ತಲವಾರು ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ಕೊಣಾಜೆ ವಿ.ವಿ ಕ್ಯಾಂಪಸ್ ಹಾಸ್ಟೆಲ್ ಬಳಿ ನಡೆದಿದೆ.

Ad Widget . Ad Widget .

ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಿಜೆಪಿ ಪ್ರಮುಖರಾದ ಪ್ರಕಾಶ್ ಶೆಟ್ಟಿ(41) ಎಂಬವರ ಮೇಲೆ ತಲವಾರು ದಾಳಿ ನಡೆದಿದೆ. ಸಮಯ ಪ್ರಜ್ಞೆ ಮೆರೆದ ಪ್ರಕಾಶ್ ಅವರು ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ.

Ad Widget . Ad Widget .

ಕೊಣಾಜೆ ವಿವಿ ಆವರಣದ ಹಾಸ್ಟೆಲ್ ಬಳಿಯ ದುರ್ಗಾ ಫ್ಯಾನ್ಸಿ & ಜನರಲ್ ಸ್ಟೋರ್ ನ ಮಾಲಕರಾದ ಪ್ರಕಾಶ್ ಅವರು ನಿನ್ನೆ ರಾತ್ರಿ 9.30 ಗಂಟೆಗೆ ಅಂಗಡಿ ಬಂದ್ ಮಾಡಿ ಮನೆ ಕಡೆಗೆ ಹೊರಟಿದ್ದರು. ಅಂಗಡಿಯ ಅನತಿ ದೂರದಲ್ಲಿ ಕಪ್ಪು ಪಲ್ಸರ್ ಬೈಕಿನಲ್ಲಿ ಕಾದು ಕುಳಿತಿದ್ದ ಮೂವರು ಯುವಕರನ್ನು ಪ್ರಕಾಶ್ ಮೊದಲೇ ಗಮನಿಸಿದ್ದರು ಎನ್ನಲಾಗಿದೆ. ಹೀಗಾಗಿ ಪ್ರಕಾಶ್ ಅವರು ಅಂಗಡಿ ಬಂದ್ ಮಾಡಿ ಪರಿಚಯಸ್ಥ ಮಂಜುನಾಥ್ ಎಂಬವರ ಬೈಕ್ ಏರಿ ಹೊರಟಾಗ ಹಿಂದಿನಿಂದ ಬೈಕ್ ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಪ್ರಕಾಶ ಅವರನ್ನು ಗುರಿಯಾಗಿಸಿ ತಲವಾರು ಬೀಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತಿದ್ದ ಪ್ರಕಾಶ್ ಶೆಟ್ಟಿ ತಲವಾರು ಏಟನ್ನು ತಪ್ಪಿಸಲು ಯತ್ನಿಸಿದಾಗ ಇವರ ಬೈಕ್ ಉರುಳಿ ಬಿದ್ದಿದೆ. ಕೂಡಲೇ ಬೈಕ್ ಚಾಲಕ ಮತ್ತು ಪ್ರಕಾಶ್ ಹತ್ತಿರದ ಜನ ವಸತಿ ಸ್ಥಳಕ್ಕೆ ಓಡಿ ಬಚಾವಾಗಿದ್ದಾರೆ.

ಪ್ರಕಾಶ್ ಬಲ ಕೈಗೆ ತಲವಾರಿನ ಏಟು ತಗಲಿದ್ದು ಈ ಬಗ್ಗೆ ಅವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *