Ad Widget .

ವೈದ್ಯರ ನಿರ್ಲಕ್ಷ್ಯದಿಂದ ಪ್ರೈವೇಟ್ ಪಾರ್ಟ್ ಡ್ಯಾಮೇಜ್| ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು ಅಚಾತುರ್ಯ|

Ad Widget . Ad Widget .

ಚಿಕ್ಕಮಗಳೂರು: ಆಪರೇಷನ್ ಗೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬರ ಖಾಸಗಿ ಅಂಗಕ್ಕೆ ಗಾಯಗೊಳಿಸಿರುವ ಘಟನೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಗಾಯಗೊಂಡಿರುವ ಗಾಯಾಳು ಪೊಲೀಸರ ಮೊರೆ ಹೋಗಿದ್ದಾರೆ.

Ad Widget . Ad Widget .

ಹರ್ನಿಯಾ ಆಪರೇಷನ್ ಗೆಂದು ಅಕ್ಟೋಬರ್ 12ರಂದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಯೋಗೇಂದ್ರ ಎಂಬವರು ದಾಖಲಾಗಿದ್ದು, ಆಪರೇಷನ್ ವೇಳೆಯಲ್ಲಿ ಅವರ ಖಾಸಗಿ ಅಂಗಕ್ಕೆ ಪೈಪ್ ಸಿಕ್ಕಿಸಲಾಗಿತ್ತು.ತೀವ್ರ ತರವಾಗಿ ಪೈಪ್ ಚುಚ್ಚಿದ್ದರಿಂದ ಅವರ ಖಾಸಗಿ ಅಂಗಕ್ಕೆ ಗಾಯವಾಗಿತ್ತು.

ಈ ಬಗ್ಗೆ ಅವರು ಆಸ್ಪತ್ರೆ ಸಿಬ್ಬಂದಿ ಸಹಿತ ವೈದ್ಯರ ಬಳಿಯಲ್ಲಿ ವಿಚಾರಿಸಿದಾಗ ಉಡಾಫೆಯಾಗಿ ಉತ್ತರಿಸಿದ್ದು ಇದರಿಂದ ನೊಂದ ಯೋಗೇಂದ್ರ ತಪ್ಪಿತಸ್ಥ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರ ಮೊರೆ ಹೋಗಿದ್ದಾರೆ.

Leave a Comment

Your email address will not be published. Required fields are marked *