Ad Widget .

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಹೋಟೆಲ್ ಉದ್ಯಮದವರು ನಿಧಾನಗತಿಯ ಚೇತರಿಕೆಯನ್ನು ಕಾಣಬಹುದು.ಕೆಲವು ಕಲಾವಿದರುಗಳಿಗೆ ಬಾಕಿ ಸಂಭಾವನೆಯ ಹಣ ಈಗ ಬರುತ್ತದೆ. ಸಿನಿಮಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಹ ಕಲಾವಿದರುಗಳಿಗೆ ಕೆಲಸಗಳು ಬರಲಾರಂಭಿಸುತ್ತವೆ. ಮಹಿಳೆಯರು ನಡೆಸುವ ಹಣಕಾಸಿನ ವ್ಯವಹಾರಗಳಲ್ಲಿ ಅಲ್ಪ ನಷ್ಟದ ಸಾಧ್ಯತೆ ಇದೆ. ವೃತ್ತಿಯಲ್ಲಿ ಹೆಚ್ಚಿನ ಆದಾಯ ಬರಲಿದೆ. ಷೇರುಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳ ಹೂಡುವುದು ಅಷ್ಟು ಒಳಿತಲ್ಲ. ನಿಮ್ಮ ದುಡುಕುತನದ ನಡವಳಿಕೆಯನ್ನು ಸಾತ್ವಿಕ ನಡವಳಿಕೆಯಾಗಿ ಬದಲಿಸಿಕೊಳ್ಳುವುದು ಅತಿ ಉತ್ತಮ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಬಯಸುತ್ತಿದ್ದ ಆಸ್ತಿಯ ಬೆಲೆಯು ಹೆಚ್ಚಾಗಬಹುದು. ದ್ರವರೂಪದ ಆಹಾರ ವಸ್ತುಗಳನ್ನು ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ.

Ad Widget . Ad Widget .

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಸವಲತ್ತು ದೊರೆಯುವ ಸಾಧ್ಯತೆಗಳಿವೆ. ದೊಡ್ಡ ಮಟ್ಟದ ಗುತ್ತಿಗೆದಾರರಿಗೆ ವಿದೇಶಿ ಗುತ್ತಿಗೆಗಳು ಸಿಗುವ ಎಲ್ಲಾ ಲಕ್ಷಣಗಳಿವೆ. ಮೋಟಾರು ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತಾರಗೊಳ್ಳುತ್ತದೆ. ವಾಹನ ದುರಸ್ತಿ ಮಾಡುವವರು ಹೆಚ್ಚಿನ ಆದಾಯವನ್ನು ಕಾಣಬಹುದು. ವೈಜ್ಞಾನಿಕ ಮಿಲಿಟರಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಅನಿರೀಕ್ಷಿತ ರೀತಿಯಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ನೌಕರರ ವರ್ಗಕ್ಕೆ ಸ್ವಲ್ಪ ಬಿಡುವು ದೊರೆತು ಮನೆಯವರೊಂದಿಗೆ ಸಂತೋಷದಿಂದ ಕಾಲಕಳೆಯುವ ಅವಕಾಶವಿದೆ.

Ad Widget . Ad Widget .

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ವ್ಯವಹಾರದಲ್ಲಿ ಒಂದು ರೀತಿಯ ವಿಶಿಷ್ಟ ತಿರುವು ಪಡೆದು ವ್ಯವಹಾರ ವೃದ್ಧಿ ಆಗುತ್ತದೆ. ಆತ್ಮವಿಶ್ವಾಸದಿಂದ ವ್ಯವಹಾರವನ್ನು ಮುನ್ನಡೆಸುವ ಯೋಗವಿದೆ. ಕೆಲವರಿಗೆ ಬಿಡುವಿಲ್ಲದ ಕೆಲಸಗಳಿಂದಾಗಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಬಹುದು. ಬಂಧುಗಳ ಮನೆಗಳಲ್ಲಿನ ಸಂತಸದ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶವಿದೆ. ದಿನಸಿ ವ್ಯಾಪಾರಿಗಳಿಗೆ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಯಂತ್ರೋಪಕರಣಗಳ ಬಿಡಿಭಾಗಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಲಾಭಾಂಶ ಹೆಚ್ಚುತ್ತದೆ. ಕೆಲವು ಬಗೆಯ ವಾಹನ ತಯಾರಿಕರಿಗೆ ಜನರಿಂದ ಹೆಚ್ಚು ಮುಂಗಡ ಹಣ ದೊರೆಯುತ್ತದೆ. ಆಸ್ತಿಯನ್ನು ಅಭಿವೃದ್ಧಿ ಮಾಡಲು ಉತ್ಸಾಹ ತೋರುವಿರಿ. ಕೆಲವು ರೀತಿಯ ತಂತ್ರಜ್ಞರಿಗೆ ವಿದೇಶಿ ಕಂಪನಿಗಳಲ್ಲಿ ಉತ್ತಮ ಸ್ಥಾನ ಸಿಗುವ ಸಾಧ್ಯತೆ ಇದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ತರಕಾರಿ ಹಣ್ಣುಗಳ ಬೇಡಿಕೆ ಹೆಚ್ಚಾಗಿ ಬೆಳೆಯುವವರಿಗೆ ಮತ್ತು ಮಾರಾಟ ಮಾಡುವವರಿಗೆ ಹೆಚ್ಚಿನ ಹಣ ದೊರೆಯುತ್ತದೆ. ಪತ್ನಿಯ ವರ್ಗದವರ ಕಡೆಯಿಂದ ಧನ ಸಹಾಯ ಹರಿದುಬರುತ್ತದೆ. ಕೃಷಿ ಭೂಮಿ ಕೊಳ್ಳಲು ಆಸಕ್ತಿ ತೋರುವಿರಿ. ವೃತ್ತಿಯಲ್ಲಿ ನಿಮ್ಮ ಕಾರ್ಯತಂತ್ರಗಳನ್ನು ತಡಮಾಡದೆ ಜಾರಿಗೊಳಿಸಿ ಇದರಿಂದ ನಿಮಗೆ ಯಶಸ್ಸು ಇರುತ್ತದೆ. ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚು ಮಾಡಬೇಕಾಗಬಹುದು. ಆಸ್ತಿ ವಿವಾದಗಳಲ್ಲಿ ಸೌಹಾರ್ದ ಮಾತುಕತೆಯಿಂದ ಲಾಭಕರವಾದ ನಿರ್ಧಾರಗಳು ಹೊರಬರುತ್ತವೆ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಚ್ಚಿನ ಪಾಲು ಪಡೆಯುವ ನಿಮ್ಮ ತಂತ್ರ ಸಫಲವಾಗುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಸಾಮಾಜಿಕ ರಂಗದಲ್ಲಿ ಕೆಲಸ ಮಾಡುವವರಿಗೆ ಜನಾನುರಾಗದ ಜೊತೆಗೆ ಸ್ಥಾನಮಾನ ದೊರೆಯುವ ಸಾಧ್ಯತೆಗಳಿವೆ. ತೈಲ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಉತ್ತಮ ಲಾಭವಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ನಿಮ್ಮ ಸ್ನೇಹ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ವಿದ್ವಾಂಸರುಗಳಿಗೆ ಗೌರವಾದರಗಳು ದೊರೆಯುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಈಗ ಚಿನ್ನಾಭರಣಗಳನ್ನು ಕೊಳ್ಳುವ ಯೋಗವಿದೆ. ಕೆಲವೊಂದು ಸಾಲ ತೀರಿಸಿ ನೆಮ್ಮದಿ ಕಾಣುವಿರಿ. ಪಿತ್ತ ಭಾದೆ ಇರುವವರಿಗೆ ಸ್ವಲ್ಪ ಅನಾರೋಗ್ಯ ಕಾಡಬಹುದು. ಸಂಗಾತಿಯಿಂದ ಹೆಚ್ಚಿನ ಸಹಾಯವನ್ನು ನಿರೀಕ್ಷೆ ಮಾಡಬಹುದು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಮಹಿಳೆಯರು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಕೀರ್ತಿಪತಾಕೆಯನ್ನು ಹಾರಿಸುವರು. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭ ಹೆಚ್ಚು ಮಾಡಿಕೊಳ್ಳುವ ಕಲೆ ತಿಳಿದುಬರುತ್ತದೆ. ವಾಹನ ಚಲಾವಣೆಯನ್ನು ಮಾಡುವಾಗ ಎಚ್ಚರ ಇರಲಿ. ಗೃಹ ನಿರ್ಮಾಣ ಕಾರ್ಯಗಳನ್ನು ಮಾಡಬಹುದು. ಆದರೆ ಅದಕ್ಕೆ ಬೇಕಾಗುವ ಹಣದ ಬಗ್ಗೆ ಸರಿಯಾದ ನಿರ್ಧಾರಗಳನ್ನು ಮಾಡಿಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾದ ಸೌಲಭ್ಯಗಳು ದೊರೆಯುವುದರ ಜೊತೆಗೆ ಹೆಚ್ಚಿನ ಅವಕಾಶಗಳು ಸಹ ದೊರೆಯುತ್ತದೆ. ಶೀತಬಾಧೆ ಇರುವವರು ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಉತ್ತಮ. ನಿಮ್ಮ ಸಾಲವನ್ನು ತೀರಿಸಲು ತಾಯಿಯಿಂದ ಸಹಕಾರಗಳು ದೊರೆಯುತ್ತವೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಿರಿ. ನಿವೇಶನ ಖರೀದಿ ವಿಚಾರವಾಗಿ ಚರ್ಚೆ ಮಾಡುವಿರಿ. ಆದಾಯದಲ್ಲಿ ಸಾಮಾನ್ಯ ಹೆಚ್ಚಳವನ್ನು ಕಾಣಬಹುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆಗಳು ಕಾಣಬಹುದು. ಅಪೂರ್ಣವಾಗಿದ್ದ ಪಾಲುದಾರಿಕೆಯ ವ್ಯವಹಾರದ ಕರಾರುಗಳು ಈಗ ಪೂರ್ಣಗೊಳ್ಳುತ್ತವೆ. ಹೆಚ್ಚಿನ ಜವಾಬ್ದಾರಿಯನ್ನು ನೀವು ವಹಿಸಿಕೊಂಡು ಹೆಚ್ಚಿನ ಲಾಭವನ್ನು ಪಡೆಯಬಹುದು. ಮಕ್ಕಳಿಂದ ಹಿರಿಯರಿಗೆ ಆರ್ಥಿಕ ಸಹಕಾರ ದೊರೆಯುತ್ತದೆ. ಸಾಮಾಜಿಕ ರಂಗದಲ್ಲಿ ಕೆಲಸ ಮಾಡುವವರಿಗೆ ಹೊಸಬರು ಪರಿಚಯವಾಗಿ ಕೆಲಸ ಮಾಡಲು ಉತ್ಸಾಹ ಮೂಡುತ್ತದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಲಾಭವಿರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಕಾರ್ಯಕ್ಷೇತ್ರಗಳಲ್ಲಿ ಸುಸೂತ್ರವಾಗಿ ಕೆಲಸಗಳು ನಡೆದು ನಿಮ್ಮ ವರ್ಚಸ್ಸು ಹೆಚ್ಚುತ್ತದೆ. ಸೂಕ್ತ ವ್ಯಕ್ತಿಗಳಿಂದ ಸಕಾಲದಲ್ಲಿ ಸಲಹೆ ಮತ್ತು ಸಹಾಯ ಒದಗಿ ನಿಮ್ಮ ಕೆಲಸಗಳು ಹಗುರಾಗುತ್ತದೆ. ಉದ್ಯೋಗವನ್ನು ಅರಸುತ್ತಿರುವವರ ಬುದ್ಧಿಮತ್ತೆ ಹಾಗೂ ತೀಕ್ಷಣತೆ ಸಂಬಂಧಪಟ್ಟವರ ಗಮನವನ್ನು ಸೆಳೆಯುತ್ತದೆ. ತಾಂತ್ರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಉನ್ನತ ಸ್ಥಾನವನ್ನು ನಿರೀಕ್ಷಿಸಬಹುದು. ಸತ್ಕಾರ್ಯಗಳಿಗೆ ಸಹಾಯವನ್ನು ಕೋರಿ ಬರುವವರಿಗೆ ಕೈಲಾದಷ್ಟು ಸಹಾಯಮಾಡಿ ಸಂತೋಷಿಸುವಿರಿ. ಬಂಧುಗಳ ನಡುವೆ ಇದ್ದ ವೈಮನಸ್ಯ ಸದ್ಯದಲ್ಲೇ ದೂರವಾಗುವುದು. ರಾಜಕಾರಣಿಗಳು ವಿವಾದಾತ್ಮಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸದಿರುವುದೇ ಬಹಳ ಉತ್ತಮ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಸ್ವಲ್ಪ ಕಾನೂನು ತೊಂದರೆಗಳು ಬರಬಹುದು. ನಿಮ್ಮ ಶತ್ರುಬಾಧೆಗಳು ನಿವಾರಣೆಯಾಗುವ ಲಕ್ಷಣಗಳು ಕಾಣುತ್ತಿವೆ. ಸಂಗಾತಿಯಿಂದ ದೊರೆಯುವ ಸಲಹೆಗಳನ್ನು ಪರಿಶೀಲಿಸಿ ನಡೆಯುವುದು ಉತ್ತಮ. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವತ್ತ ತಿರುಗುತ್ತದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ವೈಯಕ್ತಿಕ ಜೀವನದಲ್ಲಿನ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳುವ ದಿಕ್ಕಿನಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಮೇಲಧಿಕಾರಿಗಳು ಕೆಲಸಕಾರ್ಯಗಳಲ್ಲಿ ನಿಮ್ಮೊಂದಿಗೆ ಇರುವರು. ಆಸ್ತಿ ಮಾರಾಟದಿಂದ ಹೆಚ್ಚಿನ ಲಾಭವನ್ನೂ ಪಡೆಯುವಿರಿ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಶಿಸ್ತುಬದ್ಧ ಜೀವನದಿಂದಾಗಿ ಎಲ್ಲರ ಗಮನ ಸೆಳೆಯುವಿರಿ. ಸಕಾರಾತ್ಮಕ ಚಿಂತನೆಗಳಿಂದ ಬಂದಿದ್ದ ಸಮಸ್ಯೆಗಳು ಕರಗಿ ಹೋಗುವುವು. ಆಪ್ತ ಸ್ನೇಹಿತರ ಸಲಹೆಗಳು ನಿಮಗೆ ಉಪಯೋಗಕ್ಕೆ ಬರುತ್ತವೆ. ಹೊಸ ಅವಕಾಶಗಳು ತೆರೆಯುವುದರಿಂದ ನಿಯೋಜಿತ ಕೆಲಸಗಳನ್ನು ಒಪ್ಪಿ ಮಾಡುವಿರಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಗುತ್ತಿಗೆ ವ್ಯವಹಾರಗಳನ್ನು ಮಾಡುವವರಿಗೆ ಸರ್ಕಾರಿ ಗುತ್ತಿಗೆಗಳು ದೊರೆಯುವ ಸಂದರ್ಭವಿದೆ. ಭೂ ವ್ಯವಹಾರಗಳಿಂದ ಹೆಚ್ಚಿನ ಲಾಭವಿರುತ್ತದೆ. ಮಕ್ಕಳೊಡನೆ ತಾಯಿಯರ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಆಮದು ಮತ್ತು ರಫ್ತು ಮಾಡುವವರ ವ್ಯವಹಾರ ವೃದ್ಧಿಯಾಗುತ್ತದೆ. ಹಣಕಾಸಿನ ಸ್ಥಿತಿಯು ನಿಮ್ಮ ಅಗತ್ಯವನ್ನು ಪೂರೈಸುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಸೌಲಭ್ಯಗಳು ದೊರಕುವ ಸಾಧ್ಯತೆ ಇದೆ. ಕೃಷಿಕ್ಷೇತ್ರದಲ್ಲಿ ದುಡಿಯುವವರಿಗೆ ಉತ್ತಮ ಆದಾಯ ಇರುತ್ತದೆ. ದರ್ಜಿಗಳಿಗೆ ಬೇಡಿಕೆ ಹೆಚ್ಚುತ್ತದೆ. ವ್ಯವಹಾರಗಳಲ್ಲಿ ಅತಿಯಾದ ಬದಲಾವಣೆ ಅಸಾಧ್ಯ. ಇರುವುದರಲ್ಲಿಯೇ ಹೊಂದಿಸಿಕೊಂಡು ದುಡಿಯುವುದು ಉತ್ತಮ. ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಮಾಡಿದ ಕೆಲಸಗಳಿಗೆ ಉತ್ತಮ ಫಲವಿರುತ್ತದೆ. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಹೊಸ ಅವಕಾಶಗಳು ಅರಸಿಕೊಂಡು ಬರುತ್ತವೆ. ಯುವಕರ ಒಡಕು ಮಾತು ಅವರಿಗೆ ಮುಳುವಾಗುವ ಸಾಧ್ಯತೆಗಳಿವೆ. ಸೋದರರು ನಿಮ್ಮ ಸಹಾಯವನ್ನು ಅರಸಿ ಬರುವರು. ಕೆಲವೊಂದು ಸಮಸ್ಯೆಗಳಿಗೆ ನಿಧಾನವಾಗಿ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ಹಣದ ಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಸ್ವತಂತ್ರ ವೃತ್ತಿಯವರಿಗೆ ಆದಾಯ ಹೆಚ್ಚಿದರೂ ಅನಗತ್ಯ ಖರ್ಚುವೆಚ್ಚಗಳ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಪೀಠೋಪಕರಣಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಕುಶಲಕರ್ಮಿಗಳಿಗೆ ಪ್ರತಿಭಾಪ್ರದರ್ಶನದ ಅವಕಾಶದಿಂದಾಗಿ ಹಾಗೂ ಕಲಾವಸ್ತುಗಳ ಮಾರಾಟದಿಂದ ಉತ್ತಮ ಲಾಭವಿರುತ್ತದೆ. ಆರ್ಥಿಕ ಅನುಕೂಲಕ್ಕಾಗಿ ಮಾಡಿದ ಪ್ರಯತ್ನದಲ್ಲಿ ಯಶಸ್ಸನ್ನು ಕಾಣುವಿರಿ. ಕೃಷಿಗೆ ಸಂಬಂಧಿತ ಕೈಗಾರಿಕಾ ಕ್ಷೇತ್ರದಲ್ಲಿ ಲಾಭಾಂಶಗಳು ಹೆಚ್ಚುತ್ತವೆ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ ದೊರೆಯುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *