ಪುತ್ತೂರು: ಅನ್ಯಕೋಮಿನ ವ್ಯಕ್ತಿಯಿಂದ ಎಂಡೋಸಲ್ಪಾನ್ ಪೀಡಿತ 20 ವರ್ಷದ ಯುವಕನೊಬ್ಬನ ಮೇಲೆ ಅತ್ಯಾಚಾರ ನಡೆದ ಘಟನೆ ಪುತ್ತೂರಿನ ಮುರದಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ಮುರ ನಿವಾಸಿ ಮಹಮ್ಮದ್ ಹನೀಫ್ (50) ಎನ್ನಲಾಗಿದೆ.
ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಪುತ್ತೂರು ನಗರ ಠಾಣೆಯಲ್ಲಿ ಬಂಧಿಸಿ, ತನಿಖೆ ನಡೆಸಲಾಗುತ್ತಿದೆ.
ಶುಕ್ರವಾರ ಸಂಜೆ ಯುವಕ ಸಂಜೆ 6.00 ಗಂಟೆಗೆ ವಾಕಿಂಗ್ ಗೆಂದು ಮನೆಯಿಂದ ಹೋಗಿದ್ದು ಮನೆಗೆ ಮರಳಿದ ಸಂದರ್ಭದಲ್ಲಿ ಆತನ ವಸ್ತ್ರ ಮಣ್ಣಿನಿಂದ ಕೂಡಿದನ್ನು ಕಂಡು ಮನೆ ಮಂದಿ ವಿಚಾರಿಸಿದಾಗ ಅತ್ಯಾಚಾರದ ಯತ್ನ ಬೆಳಕಿಗೆ ಬಂದಿದೆ. ಆರೋಪಿ ಮಹಮ್ಮದ್ ಹನೀಫ್ ಕಬ್ಬು ನೀಡುವ ನೆಪದಲ್ಲಿ ಮುರ ರೈಲ್ವೇ ಕ್ರಾಸ್ ಹತ್ತಿರ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಯುವಕ ನಿರಾಕರಿಸಿದ ಸಂದರ್ಭದಲ್ಲಿ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಕೊಲ ಮಾಡುವ ಬೆದರಿಕೆ ಒಡ್ಡಿದ್ದಾನೆ.