ಹಾನಗಲ್: ಪ್ರಧಾನಿ ನರೇಂದ್ರ ಮೋದಿ ಐವತ್ತಾರು ಇಂಚಿನ ಎದೆಯಿದೆ ಅಂತಾರೆ. ಎದೆ ಇರೋದು ಮುಖ್ಯವಲ್ಲ. ಎದೆಯಲ್ಲಿ ಮಾತೃ ಹೃದಯ ಇರಬೇಕು. ಅದಿಲ್ಲದಿದ್ದರೆ ಎಷ್ಟು ಇಂಚಿನ ಎದೆ ಇದ್ದರೇನು ಉಪಯೋಗ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ವೋಟಿನ ಮೂಲಕ ಬಿಜೆಪಿ ಅಭ್ಯರ್ಥಿ ಸಜ್ಜನರನ್ನ ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿ ಮಾನೆಯವರನ್ನ ಗೆಲ್ಲಿಸಿ ವಿಧಾನಸಭೆಗೆ ಕಳಿಸಿ. ದೀಪಾವಳಿಗೆ ಮುಂಚೆಯೇ ಮಾನೆಯವರನ್ನ ಗೆಲ್ಲಿಸಿ, ಪಟಾಕಿ ಹೊಡಿರಿ. ಈ ಚುನಾವಣೆಯನ್ನ ದೇಶದ ಜನರು ನೋಡ್ತಿದ್ದಾರೆ. ಕೊರೊನಾ ಓಡಿಸಿ ಅಂದ್ರೆ ಜಾಗಟೆ ಬಾರಿಸಿ, ಚಪ್ಪಾಳೆ ತಟ್ಟಿ ಅಂದರು ಪ್ರಧಾನಿ ಮೋದಿ. ಯಾವನ್ರಿ ಇವನು ಪ್ರಧಾನ ಮಂತ್ರಿ? ಇಂಥವರೆಲ್ಲ ಪ್ರಧಾನಿ ಆಗೋಕೆ ಲಾಯಕ್ಕೇನ್ರಿ? ನನಗೆ ವೈಯಕ್ತಿಕವಾಗಿ ಯಾರ ಮೇಲೂ ಕೋಪ ಇಲ್ಲ. ಅವರು ಮಾಡ್ತಿರೋದನ್ನ ನೋಡಿ ಕೋಪ ಬರ್ತಿದೆ ಎಂದು ಸಿದ್ದರಾಮಯ್ಯ ಗುಡುಗಿದರು.
ರೈತರು ಚಳವಳಿ ಮಾಡಿದ್ರೆ ಕಾರು ಹರಿಸಿ ಸಾಯಿಸುತ್ತಾರೆ. ಕೇಂದ್ರದ ಮಂತ್ರಿ ಮಗ ಕಾರು ಹರಿಸಿ ರೈತರನ್ನ ಸಾಯಿಸಿದ. ಇವರನ್ನ ಲಜ್ಜೆಗೆಟ್ಟವರು, ಕೊಲೆಗಡುಕರು ಅನ್ನಬೇಕಲ್ವಾ? ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.