Ad Widget .

ನಡುರಸ್ತೆಯಲ್ಲೇ ಮಹಿಳೆಯ ಕತ್ತು ಸೀಳಿ ಕೊಲೆ| ಆಸ್ತಿಗಾಗಿ ಹೆತ್ತ‌ಮ್ಮನಿಗೆ ಸ್ಕೆಚ್ ಹಾಕಿದ್ನಾ ಪುತ್ರ..?

Ad Widget . Ad Widget .

ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರು ದಸರಾ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ತೆರಳಿ ರಾತ್ರಿ ಮನೆಗೆ ವಾಪಸ್ ಬರುತ್ತಿದ್ದಂತೆ ಇಬ್ಬರು ಸೇರಿ ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Ad Widget . Ad Widget .

ಧರ್ಮಛತ್ರ ರಸ್ತೆಯಲ್ಲಿ ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ಧರ್ಮಛತ್ರ ರಸ್ತೆಯ ನಿವಾಸಿ 55 ವರ್ಷದ ನಳಿನಿ ಕೊಲೆಯಾದವರು. ಕೃತ್ಯದ ವೇಳೆ ಚೀರಾಡುವ ಶಬ್ದ ಕೇಳಿ ಓಡಿಬಂದ ಸ್ಥಳೀಯರು ಇಬ್ಬರು ಕೊಲೆಗಡುಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೃತ್ಯಕ್ಕೆ ಕುಟುಂಬದ ಒಳಗಿನ ಆಸ್ತಿ ವಿವಾದವೇ ಕಾರಣ ಎನ್ನಲಾಗಿದೆ. ಆಕೆಯ ಮಗನೇ ಸುಪಾರಿ ನೀಡಿ ತಾಯಿಯನ್ನು ಕೊಲೆ ನಡೆಸಿದ್ದಾನೆ ಎಂಬ ಅನುಮಾನ ಕೇಳಿಬಂದಿದೆ. ಕೊಲೆ ನಡೆಸಿರುವ ಆಂಧ್ರಪ್ರದೇಶದ ವಿಜಯವಾಡ ಮೂಲದ ಹರಿ ಹಾಗೂ ಮುಖೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ

Leave a Comment

Your email address will not be published. Required fields are marked *