Ad Widget .

ಪುತ್ರಿಯನ್ನೇ ಅತ್ಯಾಚಾರ ನಡೆಸಿದ ಎಸ್.ಪಿ ಜಿಲ್ಲಾಧ್ಯಕ್ಷ| ಇತರ ನಾಯಕರೊಂದಿಗೂ ಮಲಗಲು ಬಲವಂತ| ಈತನೂ ಒಬ್ಬ ತಂದೆಯೇ..?

Ad Widget . Ad Widget .

ಲಕ್ನೋ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷನೊಬ್ಬ ತನ್ನ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಹಣಕ್ಕಾಗಿ ರಾಜಕೀಯ ನಾಯಕರ ಜೊತೆಗೆ ಸಹಕರಿಸುವಂತೆ ಬಲವಂತ ಪಡಿಸಿದ ಘಟನೆ ಬೆಳಕಿಗೆ ಬಂದಿದ್ದು 28 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲಲಿತ್ ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

Ad Widget . Ad Widget .

11ನೇ ಕ್ಲಾಸ್ ಓದುತ್ತಿರುವ ಅಪ್ರಾಪ್ತ ಬಾಲಕಿ ಸಂತ್ರಸ್ತೆಯಾಗಿದ್ದು, ತನ್ನ ಮೇಲೆ ಅತ್ಯಾಚಾರ ನಡೆಸಿರುವ 28 ಮಂದಿ ವಿರುದ್ಧ ದೂರು ನೀಡಿದ್ದಾಳೆ. ಈಕೆಯ ತಂದೆ ತಿಲಕ್ ಯಾದವ್ ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷನಾಗಿದ್ದು, ಆತನೇ ಮೊದಲ ಬಾರಿಗೆ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ. 6ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಅತ್ಯಾಚಾರ ಎಸಗಿದ್ದು, ಆನಂತರ ಆಗಿಂದಾಗ್ಗೆ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಆನಂತರ ತನ್ನ ರಾಜಕೀಯ ಸ್ನೇಹಿತರಿಗೆ ಹಣಕ್ಕಾಗಿ ತನ್ನನ್ನು ಒಪ್ಪಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಅಲ್ಲದೆ, ತಂದೆಯೇ ತಾನು ಹೇಳುತ್ತಿದ್ದ ಎಲ್ಲರ ಜೊತೆಗೂ ಲೈಂಗಿಕ ಸಂಬಂಧ ಒಪ್ಪಿಸುವಂತೆ ಬಲವಂತ ಪಡಿಸುತ್ತಿದ್ದ. ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ತಿಲಕ್ ಯಾದವ್, ಆತನ ಮೂವರು ಕಿರಿಯ ಸೋದರರು, ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ದೀಪಕ್ ಅಹಿರ್ವಾರ್, ಮತ್ತೊಬ್ಬ ಬಿಎಸ್ಪಿ ಲೀಡರ್ ನೀರಜ್ ತಿವಾರಿ, ಆತನ ಸಂಬಂಧಿಕರು ಕೂಡ ಅತ್ಯಾಚಾರ ನಡೆಸಿದ ಆರೋಪಿಗಳಲ್ಲಿ ಸೇರಿದ್ದಾರೆ.

ಈ ಬಗ್ಗೆ ಯಾರಿಗಾದ್ರೂ ಮಾಹಿತಿ ನೀಡಿದರೆ, ತಾಯಿಯನ್ನು ಕೊಲ್ಲುವುದಾಗಿ ತಂದೆ ಬೆದರಿಸಿದ್ದ. ಬಾಲಕಿಯ ದೂರಿನಂತೆ ತಿಲಕ್ ಯಾದವ್ ಸೇರಿ 28 ಮಂದಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಅತ್ಯಾಚಾರ, ಹಲ್ಲೆ, ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *