ಪೇಸ್ಬುಕ್ ಗೆಳೆಯನಿಂದ ಅಪ್ರಾಪ್ತೆಯ ಅತ್ಯಾಚಾರ

Ad Widget ... ..

ಬಲಿಯಾ: ಫೇಸ್‍ಬುಕ್ ಜಾಲತಾಣದಲ್ಲಿ ಪರಿಚಯಗೊಂಡ ಕಾಮುಕನೊಬ್ಬನ 16 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ದೊಕಾಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Ad Widget

ಹರ್ದೋಯಿ ಜಿಲ್ಲೆಯ 31 ವರ್ಷದ ಯುವಕ ಫೇಸ್‍ಬುಕ್‍ನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡು ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ.

ಆತನ ಮಾತು ನಂಬಿ ಕಳೆದ ಆ.25 ರಂದು ಬಾಲಕಿ ಆತನ ಬಳಿಗೆ ತೆರಳಿದ್ದಾಗ ಆತ ಪುಸಲಾಯಿಸಿ ಅತ್ಯಚಾರ ನಡೆಸಿ ಅಪ್ರಾಪ್ತೆಯೊಂದಿಗೆ ತಲೆಮರೆಸಿಕೊಂಡಿದ್ದ.

ತನ್ನ ಮಗಳ ನಾಪತ್ತೆ ಕುರಿತಂತೆ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಚರಣೆಗಿಳಿದ ದೊಕಾಟಿ ಪೆÇಲೀಸರು ಬೈರಿಯಾ ಬಸ್ ನಿಲ್ದಾಣದಲ್ಲಿ ಅಪ್ರಾಪ್ತೆಯೊಂದಿಗೆ ಇದ್ದ ವ್ಯಕ್ತಿಯನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿರುವ ವ್ಯಕ್ತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Comment

Your email address will not be published. Required fields are marked *