Ad Widget .

ಮೈಸೂರು: ಜಂಬೂ ಸವಾರಿಗೆ ಕ್ಷಣಗಣನೆ|

Ad Widget . Ad Widget .

ಮೈಸೂರು: ಅರಮನೆ ನಗರಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಶುಭ ಶುಕ್ರವಾರ(ಅ.15) ಬೆಳ್ಳಂಬೆಳಗ್ಗೆ 4.40ಕ್ಕೆ ಅರಮನೆಯಲ್ಲಿ ವಿಜಯದಶಮಿ‌ ಪೂಜಾ ಕೈಂಕರ್ಯಗಳು ಆರಂಭವಾಯಿತು. ಕಳೆದೊಂದು ವಾರದಿಂದ ಆರಂಭವಾಗಿರುವ ನಾಡಹಬ್ಬ ದಸರಾ ಉತ್ಸವದ ಸಂಭ್ರಮಕ್ಕೆ ಇಂದಿನ ಜಂಬೂಸವಾರಿ ಮೆರವಣಿಗೆಯ ಮೂಲಕ ತೆರೆ ಬೀಳಲಿದೆ.

Ad Widget . Ad Widget .

ಕೊರೊನಾ ಕಾರಣದಿಂದ ಈ ಬಾರಿಯೂ ಸರಳವಾಗಿ ದಸರಾ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಪ್ರತಿಬಾರಿಯಂತೆ ಅರಮನೆ ನಗರಿ ಸುಂದರವಾಗಿ ಸಿಂಗಾರಗೊಂಡಿದೆ.

ಐತಿಹಾಸಿಕ ದಸರಾ ಮಹೋತ್ಸವನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಅರಮನೆ ನಗರಿಯ ಎಲ್ಲೆಲ್ಲೂ ದಸರಾ ಸಂಭ್ರಮ ಮನೆಮಾಡಿದ್ದು, ಅಂಬಾರಿ ಮೇಲೆ ತಾಯಿ ಚಾಮುಂಡೇಶ್ವರಿ ದೇವಿ ರಾರಾಜಿಸಲಿದ್ದಾಳೆ.

Leave a Comment

Your email address will not be published. Required fields are marked *