Ad Widget .

ದಸರಾ ಮೆರವಣಿಗೆಯ ಮೇಲೆ ಹರಿದ ಕಾರು| ನಾಲ್ವರ ಸಾವು, ಹಲವರು ಗಂಭೀರ

ಹೊಸದಿಲ್ಲಿ: ಛತ್ತೀಸ್‌ಗಡದ ಜಶ್‌ಪುರ ಜಿಲ್ಲೆಯಲ್ಲಿ ದುರ್ಗಾದೇವಿಯ ವಿಗ್ರಹವನ್ನು ವಿಸರ್ಜಿಸಲು ಭಕ್ತರು ತೆರಳುತ್ತಿದ್ದಾಗ ಕಾರೊಂದು ಜನರ ಮೇಲೆ ಹರಿದ ಪರಿಣಾಮವಾಗಿ ನಾಲ್ಕು ಮಂದಿ‌ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.

Ad Widget . Ad Widget .

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪಾಥಲ್ ಗಾಂವ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರೂನ್ ಮಹೀಂದ್ರ ಕ್ಸೈಲೊ ಕಾರು ಮಧ್ಯಪ್ರದೇಶದ ನಂಬರ್ ಪ್ಲೇಟ್ ಹೊಂದಿದ್ದು, ಭೀಕರ ಅಪಘಾತದ ನಂತರ ವೇಗವಾಗಿ ಸುಖ್ರಪಾರ ಕಡೆಗೆ ಚಲಿಸಿದೆ ಎಂದು ತಿಳಿದುಬಂದಿದೆ. ಕೋಪಗೊಂಡ ಸ್ಥಳೀಯರು ವಾಹನವನ್ನು ಹಿಂಬಾಲಿಸಿದರು ಹಾಗೂ ವಾಹನವು ರಸ್ತೆಯ ಪಕ್ಕದಲ್ಲಿ ಪತ್ತೆಯಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *