Ad Widget .

ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಕ್ಯಾನ್ಸಲ್|

Ad Widget . Ad Widget .

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯಾದ್ಯಂತ ಇಂದು ಕೋಟಿಗೊಬ್ಬ3 ಚಿತ್ರ ರಿಲೀಸ್ ಆಗಬೇಕಿದ್ದು, ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಇವತ್ತಿನ ಎಲ್ಲಾ ಪ್ರದರ್ಶನ ರದ್ದುಗೊಂಡಿದೆ.

Ad Widget . Ad Widget .

ಆದರೆ ನಾಳೆ ಎಂದಿನಂತೆ ಚಿತ್ರದ ಪ್ರದರ್ಶನ ಇರಲಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ಅಭಿಮಾನಿಗಳು ತಾಳ್ಮೆಯಿಂದ ಇರಿ. ಚಿತ್ರ ಬಿಡುಗಡೆಯಾಗಲು ಕೊಂಚ ವಿಳಂಬವಾಗಿದೆ. ಮುಂದಿನ ಸಮಯವನ್ನ ನಾನೇ ಖುದ್ದು ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕೋಟಿಗೊಬ್ಬ 3 ರಿಲೀಸ್ ಹಿನ್ನೆಲೆಯಲ್ಲಿ ಮುಂಜಾನೆ 5 ಗಂಟೆಯಿಂದಲೇ ಕಿಚ್ಚನ ಅಭಿಮಾನಿಗಳು ಥಿಯೇಟ್​​ಗೆ ಬಂದಿದ್ದರು. ಆದರೆ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಫ್ಯಾನ್ಸ್​ ಶೋ ಕ್ಯಾನ್ಸಲ್ ಆಗಿತ್ತು. ಕೆಲವೇ ಹೊತ್ತಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ಅಭಿಮಾನಿಗಳಿಗೆ ತಿಳಿಸಲಾಗಿತ್ತು. ಆದರೆ ಇಂದಿಗೆ ಈ ಸಮಸ್ಯೆ ಬಗೆಹರಿಯದ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಸದ್ಯದ ಶೋಗಳನ್ನ ಕ್ಯಾನ್ಸಲ್ ಮಾಡಲಾಗಿದೆ.

Leave a Comment

Your email address will not be published. Required fields are marked *