Ad Widget .

ಮತ್ತೊಬ್ಬ ಬಿಜೆಪಿ ಶಾಸಕನ ಅಶ್ಲೀಲ ಸಿಡಿ ಬಿಡುಗಡೆ ಫೋಟೋ ವೈರಲ್| ಯತ್ನಾಳ ಬೆಂಬಲಿಗರಿಂದ ದೂರು ದಾಖಲು| ಅಂತದ್ದೇನೈತಿ ಆ ಫೋಟೋದಾಗ ಗೊತ್ತೇನ್ರಿ?

Ad Widget . Ad Widget .

Ad Widget . Ad Widget .

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಂಬಂಧಿಸಿದ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸದ್ದು ಮಾಡತೊಡಗಿದೆ.

‘ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣ ಗಣನೆ, ಭರ್ಜರಿ ಯಶಸ್ಸು ಕಾಣಲಿ’ ಎಂಬ ಬರಹ ಹಾಗೂ ಶಾಸಕ ಯತ್ನಾಳ ಅವರ ಭಾವಚಿತ್ರ ಇರುವ ಪೋಸ್ಟ್ ಹರಿದಾಡತೊಡಗಿದೆ.

ಈ ಸಂಬಂಧ ಯತ್ನಾಳ ಅವರ ಆಪ್ತ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಜಾಧವ್ ಅವರು ವಿಜಯಪುರದ ಸೈಬರ್ ( ಸಿಇಎನ್) ಕ್ರೈಂ ಪೊಲೀಸ್ ಠಾಣೆಗೆ ಬುಧವಾರ ಸಂಜೆ ದೂರು ನೀಡಿದ್ದಾರೆ.
‘ನಮ್ಮ ಕಾಂಗ್ರೆಸ್’ ಇನ್ ಸ್ಟಾ ಗ್ರಾಮ್ ಖಾತೆಯ ಪ್ರೊಪೈಲ್ ನಲ್ಲಿ ಶಾಸಕ ಯತ್ನಾಳ ಅವರ ಭಾವಚಿತ್ರ ಹಾಗೂ ಅಶ್ಲೀಲ ಬರಹ ಹರಿದಾಡುತ್ತಿದೆ. ಈ ಮೂಲಕ ಶಾಸಕರಿಗೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *