ಪಬ್ಲಿಕ್ ನಲ್ಲಿ ಡಿ.ಕೆ ಶಿವಕುಮಾರ್ ಮಾನ ಹರಾಜು| ಉಗ್ರಪ್ಪ, ಸಲಿಂ ವಿರುದ್ದ ಡಿಕೆಶಿ ಕೆಂಡಾಮಂಡಲ| ಕಾಂಗ್ರೇಸ್ ನಲ್ಲಿ ಮೊದಲ ವಿಕೆಟ್ ಪತನ

Ad Widget ... ..

ಬೆಂಗಳೂರು: ಸಂಸದ ಉಗ್ರಪ್ಪ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ, ಆದರೀಗ ಈ ಹೇಳಿಕೆ ಕೊಟ್ಟ ನಾಯಕರಿಗೆ ಡಿ. ಕೆ. ಶಿವಕುಮಾರ್ ಫುಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಲ್ಲದೇ ಸಲೀಂರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲು ಸೂಚಿಸಿದ್ದಾರೆ.

Ad Widget

ಡಿಕೆಶಿ ವಿರುದ್ಧ ಹೇಳಿಕೆ ಕೊಟ್ಟಿದ್ದ ಸಲೀಂ, ‘ಅವರು ದೊಡ್ಡ ಸ್ಕ್ರ್ಯಾಮ್ ಇದೆ, ಕೆದುಕುತ್ತಾ ಹೋದರೆ ಇವರದ್ದು ಹೊರಬರುತ್ತೆ. ಅವರ ಹುಡುಗನ ಹತ್ತಿರವೆ 50 ರಿಂದ 100 ಕೋಟಿ ಇದೆ ಎಂದರೆ, ಡಿ ಕೆ ಹತ್ರ ಇನ್ನೆಷ್ಟು ಇರಬೇಕು?’ ಎಂದು ಪ್ರಶ್ನಿಸಿದ್ದರು. ಅಲ್ಲದೇ ಈ ಸಂದರ್ಭದಲ್ಲಿ ಸಿದ್ದರಾಮಯ್ಯರನ್ನು ಹೊಗಳಿದ್ದರು.

ಈ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ಸಲೀಂರಿಗೆ ಕರೆ ಮಾಡಿದ ಡಿಕೆಶಿ ‘ನನ್ನ ಅನ್ನ ತಿಂದು ನನಗೆ ಬೈತಿರಾ..? ನೀವೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಇರೋಕೆ ನಾಲಾಯಕ್’ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್‌ನಲ್ಲಿ ಈ ವಿಚಾರ ಮೂಡಿಸಿದ್ದು, ಮಾಧ್ಯಮಗಳ ವರದಿ ಬೆನ್ನಲ್ಲೇ ಎಚ್ಚೆತ್ತ ಕೆಪಿಸಿಸಿ ಕಾಂಗ್ರೆಸ್ ಪಕ್ಷದಿಂದಲೇ ಸಲೀಂ ಅವರನ್ನು ಅಮಾನತು ಮಾಡಿದೆ.

Leave a Comment

Your email address will not be published. Required fields are marked *