ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಸುದ್ದಿಗೋಷ್ಠಿಯಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಡೀಲ್ ರಾಜ ಎಂಬುದಾಗಿ ಕಾಂಗ್ರೆಸ್ ನಾಯಕರೇ ಹೊರ ಹಾಕಿದ್ದಾರೆ. ಡಿಕೆ ಶಿವಕುಮಾರ್ ಕೋಟಿ ಕೋಟಿ ಡೀಲ್ ನಡೆಸಿದ್ದಾರೆ ಎಂಬುದಾಗಿ ಆರೋಪವನ್ನು ಗುಸು ಗುಸು ಮಾತನಾಡುತ್ತಲ್ಲೇ ಮಾಡಿರುವುದಾಗಿ ಬಯಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿನ ಕೆಪಿಸಿಸಿಯ ಸಲೀಂ ಹಾಗೂ ವಿ.ಎಸ್ ಉಗ್ರಪ್ಪನವರು ಸುದ್ದಿಗೋಷ್ಠಿಗೂ ಮೊದಲು ಗುಸುಗುಸು ರೀತಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಮಾತನಾಡೋದು ಬಹಿರಂಗವಾಗಿದೆ.
ಸಲೀಂ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು, ಅವರು ಡೀಲ್ ಮಾಡೋ ಬಗ್ಗೆಯೂ ಮಾತನಾಡುತ್ತಾ ‘ಕೋಟಿ ಕೋಟಿ ಡೀಲ್ ಮಾಡಿದ್ದಾರೆ. ಅವರ ಬಳಿಯೇ ಹಾಗೆ ಆದ್ರೇ.. ಅವರ ಹುಡುಗರ ಬಳಿಯಲ್ಲಿ 50 ರಿಂದ 100 ಕೋಟಿವರೆಗೆ ಇದ್ದಾರೆ’ ಎನ್ನುವುದಾಗಿ ಹೇಳಿದ್ದಾರೆ.
ಈ ವೇಳೆ ವಿಎಸ್ ಉಗ್ರಪ್ಪನವರು ‘ನಾನೇ ಪಟ್ಟು ಹಿಡಿದು ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದು, ಈಗ ಅವರದ್ದು ನಡೆಯುತ್ತಾ ಇಲ್ಲ ಎನ್ನುತ್ತಲೂ ಹೇಳಿರೋದು ಬಹಿರಂಗವಾಗಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋಟಿ ಡೀಲ್.? ಮಾಡಿದ್ದಾರಾ ಎನ್ನುವ ಅನುಮಾನ ಹುಟ್ಟು ಹಾಕಿದೆ.
ಮುಖ್ಯಮಂತ್ರಿಯಾಗುವ @DKShivakumar ಅವರ ಕನಸಿಗೆ @INCKarnataka ಪಕ್ಷದ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ.
— BJP Karnataka (@BJP4Karnataka) October 13, 2021
ನಿಮ್ಮ ಅಧ್ಯಕ್ಷ ಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು ಸ್ಬಪಕ್ಷೀಯರೇ ಷರಾ ಬರೆದುಬಿಟ್ಟಿದ್ದಾರೆ.
ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ "ಡಿಕೆಶಿ ಪದಚ್ಯುತಿ" ಎಂಬ ಮಾಸ್ಟರ್ ಪ್ಲ್ಯಾನ್ನ ಭಾಗವೇ?#ಭ್ರಷ್ಟಾಧ್ಯಕ್ಷ pic.twitter.com/DE3bKSgYmZ
ಅಲ್ಲದೇ ಡಿಕೆಶಿ ಬಗ್ಗೆ ತೆಗಳಿಕೆ, ಸಿದ್ದರಾಮಯ್ಯ ಬಗ್ಗೆ ಹೊಗಳಿಕೆ ಕೇಳಿ ಬಂದಿದೆ. ವೇದಿಕೆಯಲ್ಲೇ ಕಾಂಗ್ರೆಸ್ ನ ತೆರೆಮರೆಯ ಅಸಮಾಧಾನ ಸ್ಪೋಟಗೊಂಡಿದೆ.