Ad Widget .

ಆತನ ಮನೆಯಲ್ಲಿತ್ತು ಐದು ಓಟು| ಆದರೆ ಅವನಿಗೆ ಸಿಕ್ಕಿದ್ದು ಬರೀ ಒಂದು| ಇದು ತಮಿಳುನಾಡು ಗುರೂ..!

Ad Widget . Ad Widget .

ಚೆನ್ನೈ: ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯೊಬ್ಬರು ಸ್ಪರ್ಧಿಸಿ ಒಂದು ಮತವನ್ನು ಪಡೆದು ಸುದ್ದಿಯಾಗಿದ್ದು ಅಲ್ಲದೆ ಕಣ್ಣೀರಿಟ್ಟ ಘಟನೆ ನಡೆದಿದೆ.
ಬಿಜೆಪಿ ಅಭ್ಯರ್ಥಿಯನ್ನು ಡಿ.ಕಾರ್ತಿಕ್ ಎಂದು ಗುರುತಿಸಲಾಗಿದೆ. ಇವರು ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳ್ಯಂ ಒಕ್ಕೂಟದಲ್ಲಿ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಕೇವಲ ಒಂದು ಮತವನ್ನು ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಕ್ಟೋಬರ್ 6ಮತ್ತು 9 ರಂದು ನಡೆದಿತ್ತು. ಒಟ್ಟಾರೆಯಾಗಿ, 79433 ಅಭ್ಯರ್ಥಿಗಳು,27003 ಹುದ್ದೆಗಳಿಗೆ ಸ್ಪರ್ಧಿಸಿದ್ದರು. ಪಿಎಂ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಕೇಂದ್ರ ನಾಯಕರ ಫೋಟೋಗಳನ್ನು ಪೋಸ್ಟರ್‌ನಲ್ಲಿ ಹಾಕಿ ಕಾರ್ತಿಕ್ ಚುನಾವಣೆಗೆ ಭಾರೀ ಪ್ರಚಾರ ಮಾಡಿದ್ದರು.

Ad Widget . Ad Widget .

ಬರಹಗಾರ್ತಿ ಮತ್ತು ಕಾರ್ಯಕರ್ತೆ ಮೀನಾ ಕಂದಸಾಮಿ ಟ್ವಿಟ್ವರ್ ನಲ್ಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ ಒಂದು ಮತ ಸಿಕ್ಕಿದೆ. ಇತರರಿಗೆ ಮತ ಹಾಕಲು ನಿರ್ಧರಿಸಿದ ಅವರ ಮನೆಯ ಇತರ ನಾಲ್ಕು ಮತದಾರರ ಬಗ್ಗೆ ಹೆಮ್ಮೆ ಇದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ಸಿನ ಅಶೋಕ್ ಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದು, ಬಿಜೆಪಿ ಅಭ್ಯರ್ಥಿಯು ಕೊಯಮತ್ತೂರಿನಲ್ಲಿ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅವರ ಮನೆಯಲ್ಲಿ ಐದು ಸದಸ್ಯರಿದ್ದು, ಒಂದೇ ಒಂದು ಮತವನ್ನು ಪಡೆದರು. ಈ ರೀತಿ ತಮಿಳುನಾಡು ಬಿಜೆಪಿಯನ್ನು ನಿಭಾಯಿಸುತ್ತದೆ ಎಂದು ಬರೆದಿದ್ದಾರೆ.

ಅದರೆ ಚುನಾವಣೆಯಲ್ಲಿ ಒಂದು ಮತವನ್ನು ಪಡೆಯುವುದು ದೊಡ್ಡ ಸುದ್ದಿಯಲ್ಲ. ಅಭ್ಯರ್ಥಿಯ ಮನೆಯಲ್ಲಿ 5 ಮಂದಿ ಇದ್ದರೂ ಅವರು ಒಂದೇ ಮತವನ್ನು ಪಡೆದ ಕಾರಣ ಇದು ಭಾರೀ ಸುದ್ದಿಯಾಗಿದ್ದಾರೆ.

Leave a Comment

Your email address will not be published. Required fields are marked *