ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡ ಯುವಕ

Ad Widget ... ..

ಶಿವಮೊಗ್ಗ: ಯುವಕನೊರ್ವ ಮನೆಯಿಂದ ಬೈಕ್ ನಿಂದ ಹೊರಟು ಮಾರ್ಗ ಮಧ್ಯದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆ ತೀರ್ಥಹಳ್ಳಿ ತಾಲೂಕಿನ ಕೊಣಂದೂರು ಸಮೀಪದ ಅಕ್ಲಾಪುರದಲ್ಲಿ ನಡೆದಿದೆ. ಮೃತ ಯುವಕ ಅಕ್ಲಾಪುರ ವಾಸಿ ರಾಘವೇಂದ್ರ(40) ಎಂದು ಗುರುತಿಸಲಾಗಿದೆ.

Ad Widget

ಮನೆಯಿಂದ ದತ್ತರಾಜಪುರ ಮಾರ್ಗದಲ್ಲಿ ಹೋಗುವಾಗ ಸೀಮೆಎಣ್ಣೆ ಕೊಂಡೊಯ್ದು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಆಸ್ತಿವ್ಯಾಜ್ಯದ ವೈಯಕ್ತಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಮೃತ ವ್ಯಕ್ತಿ ಪತ್ನಿ,ಎರಡು ಮಕ್ಕಳನ್ನು ಅಗಲಿದ್ದು, ಈ ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *