ಉಪ್ಪಿನಂಗಡಿ: ಭೀಕರ ರಸ್ತೆ ದುರಂತ| ಸಾರಿಗೆ ಬಸ್‌ ಹರಿದು ತಾಯಿ‌- ಮಗು ಸಾವು|

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ತಾಯಿ ಮಗು ಮೇಲೆ ಕೆಎಸ್ ಆರ್ ಟಿ ಸಿ ಬಸ್ಸು ಹರಿದ ಪರಿಣಾಮ ಅವರಿಬ್ಬರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

Ad Widget ... ..

ಶಿರ್ಲಾಲು ನಿವಾಸಿಗಳಾದ ಶಾಹಿದಾ (25), ಮತ್ತು ಅವರ ಪುತ್ರ ಶಾಹೀನ್ (1) ಮೃತಪಟ್ಟವರು. ಬಸ್ಸುಗಳ ನಡುವಿನ ಪೈಪೋಟಿಯೇ ಈ ಘಟನೆಗೆ ಕಾರಣವೆಂದು ಸಾರ್ವಜನಿಕರು ಪ್ರತಿಭಟಿಸಿದ್ದು, ಬಸ್ಸು ನಿಲ್ದಾಣದ ಒಳಗೆ ಯಾವ ಬಸ್ಸುಗಳೂ ಪ್ರವೇಶಿಸದಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Ad Widget

Leave a Comment

Your email address will not be published. Required fields are marked *