ಉಡುಪಿ: ಭೀಕರ ರಸ್ತೆ ಅಪಘಾತ – ಸವಾರ ಸ್ಥಳದಲ್ಲೇ ಸಾವು

ಉಡುಪಿ: ಉಪ್ಪೂರು ಉಡುಪಿ – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರುವಿನಲ್ಲಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಅ. 12ರ ಮಂಗಳವಾರ ನಡೆದಿದೆ.

Ad Widget ... ..

ಮೃತರನ್ನು ಮಂಡ್ಯ ಮೂಲದ ನಾಗರಾಜು (40) ಎಂದು ಗುರುತಿಸಲಾಗಿದೆ. ಇವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಕಾರು ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು ಪರಿಣಾಮ ದ್ವಿಚಕ್ರ ವಾಹನ ಸವಾರ ರಸ್ತೆಗೆ ಉರುಳಿಬಿದ್ದಿದ್ದು, ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

Ad Widget

ರೈಸ್ ಮಿಲ್ ನಲ್ಲಿ ಕೆಲಸ ಮಾಡುತಿದ್ದ ನಾಗರಾಜು ಕೆಲಸದ ನಿಮಿತ್ತ ಸಾಸ್ತಾನ ಕಡೆಗೆ ಸಂಚರಿಸುತ್ತಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ಬ್ರಹ್ಮಾವರ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *