Ad Widget .

ಫೇಸ್ಬುಕ್ ನಲ್ಲಿ ಹಿಂದುತ್ವ ವಿರೋಧಿ ‌ಫೋಸ್ಟಿಂಗ್ ಆರೋಪ| ಉಪನ್ಯಾಸಕಿಯಿಂದ ಸ್ಪಷ್ಟನೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸುಳ್ಯ: ಪೇಸ್ಟುಕ್ ನಲ್ಲಿ ಹಿಂದುತ್ವ ವಿರೋಧಿ‌ ಹಾಗೂ‌ ಧರ್ಮನಿಂದನೆ ಕುರಿತಂತೆ ಫೋಸ್ಟಿಂಗ್ ಮಾಡಲಾಗಿದೆ ಎಂದು ಸುಳ್ಯದ ಪದವಿ ಕಾಲೇಜೊಂದರ ಉಪನ್ಯಾಸಕಿಯ ಮೇಲೆ ಆರೋಪ ವ್ಯಕ್ತವಾಗಿದ್ದು, ಈ ಕುರಿತಂತೆ ಉಪನ್ಯಾಸಕಿ ಪೂರ್ಣಿಮಾ ಮಳಲಿ ‘ಸಮಗ್ರ ಸಮಾಚಾರ’ ಕ್ಕೆ ಸ್ಪಷ್ಟನೆ ನೀಡಿದ್ದಾರೆ.

Ad Widget . Ad Widget . Ad Widget .

ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ‘ನಾನು ನಿನ್ನೆ ಪುರೋಹಿತರು ಸತ್ಯನಾರಾಯಣ ಪೂಜೆ , ವರ ಮಹಾಲಕ್ಷ್ಮಿ ಪೂಜೆ ಮಾಡಲು ಹೇಳಿ ಬಡವರನ್ನು ಸುಲಿಗೆ ಮಾಡುತ್ತಾರೆ . ಬಡವರು ಜೀವನ ಮಾಡುವುದೇ ಕಷ್ಟ ಎಂದು ಹೇಳಿದ್ದು.ಹಿಂದು ಧರ್ಮದಲ್ಲಿ ಇರುವ ಸಾಮಾಜಿಕ ಅನಿಷ್ಟ ಪದ್ಧತಿಯನ್ನು ಮಾತ್ರ ಗುರುತಿಸಿ ಹೇಳಿದ್ದು. ಭಗವತ್ ಗೀತೆಯಲ್ಲಿ ಹಣ ಪಡೆದು ಪೂಜೆ ಮಾಡಿ ಎಂದು ಎಲ್ಲೂ ಹೇಳಿರುವುದಿಲ್ಲ . ನಾನು , ಭಗವತ್ ಗೀತೆ , ರಾಮಾಯಣ , ಮಹಾಭಾರತವನ್ನು ಓದುತ್ತೇನೆ . ಈ ಗ್ರಂಥಗಳ ಮೇಲೆ ಅಪಾರ ಗೌರವ ಪ್ರೀತಿ ಇದೆ . ಹಿಂದು ಧರ್ಮದ ಜೊತೆ ಎಲ್ಲ ಧರ್ಮಗಳನ್ನು ಪ್ರೀತಿಸುತ್ತೇನೆ. ಹಿಂದೂ ಧರ್ಮ ಮತ್ತು ಭಾರತದ ಮೇಲೆ ನನಗೆ ಅಪಾರ ಪ್ರೀತಿ ಇದೆ . ಯಾವ ಧರ್ಮವು ಕೂಡ ಹಣದ ಮೂಲಕ ದೇವರನ್ನು ಕಂಡುಕೊಳ್ಳಿ ಎಂದು ಎಲ್ಲೂ ಹೇಳುವುದಿಲ್ಲ. ದೇವರನ್ನು ಮಾರುಕಟ್ಟೆ ಮಾಡಬಾರದು . ದೇವರ ಹೆಸರಿನಲ್ಲಿ ಹಿಂದುಳಿದವರನ್ನು , ಮುಗ್ಧ ಜನರನ್ನು ಶೋಷಣೆ ಮಾಡಬಾರದು.ಹಿಂದೂ ಧರ್ಮದ ಮೇಲೆ ಅಪಾರ ಗೌರವ ಇರುವುದರಿಂದ ಭಾರತದ ಸಂಸ್ಕೃತಿ ತಿಳಿಯಲು ನಾನು ನನ್ನ ಸ್ನಾತಕೋತ್ತರ ಪದವಿಯಲ್ಲಿ ಇತಿಹಾಸವನ್ನು ಐಚ್ಛಿಕ ವಿಷಯವನ್ನು ತೆಗೆದುಕೊಂಡಿದ್ದು, ಸ್ವಾಮಿ ವಿವೇಕಾನಂದ , ಅಂಬೇಡ್ಕರ್ , ಬುದ್ಧ , ಬಸವಣ್ಣ ಅಬ್ದುಲ್ ಕಾಲಮ್ , ಮದರ್ ತೆರೇಸಾ , ಕುವೆಂಪು , ಶ್ರೀ ವೀರೇಂದ್ರ ಹೆಗ್ಗಡೆ , ಸಿದ್ದಗಂಗಾ ಶಿವ ಕುಮಾರ ಸ್ವಾಮೀಜಿ , ಸದ್ಗುರು ಇವರ ಚಿಂತನೆಗಳನ್ನು ನಾನು ಅನುಸರಿ ಸುತ್ತೇನೆ.
ಹಿಂದೂ ನೆಲ ಭಾರತ ನನಗೆ
ಎಲ್ಲವನ್ನು ಕೊಟ್ಟಿದೆ . ಇನ್ನೊಮ್ಮೆ ಭಾರತದಲ್ಲಿ ಹುಟ್ಟಲು ಬಯಸುತ್ತೇನೆ. ಯಾರೋ ಕಿಡಿಗೇಡಿಗಳು ಹುಟ್ಟಿದ ನೆಲಕ್ಕೆ ಯಾವುದೇ ಕಾಣಿಕೆ ಕೊಡದೆ ಇದ್ದವರು , ದೇವರನ್ನು ಮಾರುಕಟ್ಟೆ ಸರಕು ಮಾಡಿಕೊಂಡವರು ಹಿಂದೂ ಧರ್ಮವನ್ನು ಟೀಕೆ ಮಾಡುತ್ತೀರಿ ಎಂದರೆ ಎಷ್ಟು ನೋವು ಆಗಬಾರದು ? ಅದರ ಜೊತೆಗೆ ಅವರ ಕೊಳಕು
ಮನಸ್ಸಿಂದ ಮುಸ್ಲಿಂ ಧರ್ಮ ಟೀಕಿಸಿ , ಕ್ರೈಸ್ತ ಧರ್ಮ ಟೀಕಿಸಿ ಎಂದು ಅವಹೇಳನಕಾರಿ ಮಾತು ಆಡುವುದು, ಭಗವತ್ ಗೀತೆ , ಕುರಾನ್ , ಬೈಬಲ್ ಎಲ್ಲ ಸಾರಗಳು ಒಂದೇ . ದೇವನೊಬ್ಬ ನಾಮ ಹಲವು. ನಾನು ಕಟ್ಟಿ ಬೆಳೆಸಿದ ಕನ್ನಡ ಚಾನೆಲ್ 25 ಲಕ್ಷಕ್ಕೂ ಹೆಚ್ಚು ಜನ ದೇಶ , ವಿದೇಶಗಳಲ್ಲಿ ವೀಕ್ಷಿಸುತ್ತಾರೆ . ಹುಟ್ಟಿದ ನಾಡಿಗೆ ಕನ್ನಡಕ್ಕೆ ಏನು ಕೊಡುಗೆ ಕೊಡದವರು ನನ್ನನ್ನು ಟೀಕೆಸಲು ಅವರಲ್ಲಿ ಅರ್ಹತೆ ಏನು ? ಮೊದಲು ಆರಿತು ಕೊಳ್ಳಲಿ’ ಎಂದು ಬರೆದುಕೊಂಡಿದ್ದು, ನಮ್ಮ ಪ್ರತಿನಿಧಿ ಜೊತೆಗೂ ಈ ವಿಚಾರ ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *