Ad Widget .

ಸುಳ್ಯ: ಉಪನ್ಯಾಸಕಿಯ ಪೇಸ್ ಬುಕ್ ವಾಲ್ ನಲ್ಲಿ ಹಿಂದೂ ವಿರೋಧಿ ಕಮೆಂಟ್: ನೆಟ್ಟಿಗರು ಗರಂ

ಮಂಗಳೂರು: ಉಪನ್ಯಾಸಕಿಯೊಬ್ಬರು ತನ್ನ ಫೇಸ್‌ಬುಕ್‌ ವಾಲ್ ನಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಅವರು ಮಾಡಿಕೊಂಡು ಬರುತ್ತಿರುವ ಪೂಜೆ ಪುನಸ್ಕಾರಗಳನ್ನು ಲಘುವಾಗಿ ಚಿತ್ರಿಸಿದ ರೀತಿ ಬರೆದುಕೊಂಡಿರುವ ಆರೋಪ ಕೇಳಿಬಂದಿದ್ದು, ಇದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.

Ad Widget . Ad Widget .

ಸುಳ್ಯದ ಪದವಿ ಕಾಲೇಜೊಂದರ ಅತಿಥಿ ಉಪನ್ಯಾಸಕಿಯೋರ್ವರು ಮಾಡಿದ ಅವಹೇಳನಕಾರಿ ಕಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಿಂದೂ ವಿರೋದಿ ಪೋಸ್ಟ್ ಹಾಕಿದ್ದು ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ದೇವರ ಪೂಜೆ ಮಾಡುವ ಬ್ರಾಹ್ಮಣರ ಫೋಟೋವನ್ನು ಮುಂದಿಟ್ಟುಕೊಂಡು, ಈ ಸೋಂಬೇರಿಗಳು ದುಡಿದು ತಿನ್ನಲು ಆಗದೆ ಕಂಡುಹಿಡಿದ ಎರಡು ವೃತಗಳೇ ವರಮಹಾಲಕ್ಷ್ಮೀ ವೃತ ಮತ್ತು ಸತ್ಯನಾರಾಯಣ ಪೂಜೆ ಎಂಬ ಪೋಸ್ಟರ್‌ಗೆ `ಇವರ ಹೊಟ್ಟೆ ತುಂಬಿಸಲು ಹೋಗಿ ನೀವು ಸಾಲಗಾರರಾಗಬೇಡಿ’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಈ ಮೂಲಕ ಬ್ರಾಹ್ಮಣರನ್ನು ಮತ್ತು ಹಿಂದೂ ಸಮುದಾಯದವರು ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವ ವೃತಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇದರ ಬಗ್ಗೆ ಬ್ರಾಹ್ಮಣ ಸಮುದಾಯ ಹಾಗೂ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಅವಹೇಳನಕಾರಿಯಾಗಿ ಬರೆದ ಉಪನ್ಯಾಸಕಿ‌ ವಿರುದ್ದ ಪೊಲೀಸ್ ದೂರು ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ಉಪನ್ಯಾಸಕಿ ತನ್ನ ಪೋಸ್ಟ್ ಡಿಲಿಟ್ ಮಾಡಿದ್ದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *