Ad Widget .

ಕಳಚಿದ ಯಕ್ಷರಂಗದ ಕೊಂಡಿ| ಪ್ರಸಿದ್ದ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ

Ad Widget . Ad Widget .

ಸುಳ್ಯ: ಯಕ್ಷರಂಗದ ಮೇರು ಪ್ರತಿಭೆ, ಕಂಚಿನ ಕಂಠದ ಭಾಗವತ ಪದ್ಯಾಣ ಗಣಪತಿ ಭಟ್ ಇಂದು(ಅ.11) ಬೆಳಿಗ್ಗೆ ನಿಧನರಾಗಿದ್ದಾರೆ.
ತೆಂಕು ತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಕಂಠದಿಂದ ಪ್ರಸಿದ್ಧಿಯನ್ನು ಹೊಂದಿದ ಪದ್ಯಾಣ ಗಣಪತಿ ಭಟ್ ರವರು ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಪದ್ಯಾಣದವರು. ಹಲವು ದಶಕಗಳಿಂದ ಹಲವು ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಕಲಾ ಸೇವೆ ಮಾಡಿದ್ದಾರೆ.

Ad Widget . Ad Widget .

ಪದ್ಯಾಣ’ ಪದವೇ ಸಂಗೀತ ಶೋತೃಗಳಲ್ಲಿ ಸಂಚಲನೆಯನ್ನುಂಟು ಮಾಡುವಂಥದ್ದು, ಪದ್ಯಾಣ ಕುಟುಂಬ ದಲ್ಲಿ ಜನಿಸಿದವರೆಲ್ಲರೂ ಸಂಗೀತ ಅಥವಾ ಯಕ್ಷಗಾನ ಕಲಾವಿದರೆಂಬುದು ವಾಸ್ತವ ಸಂಗತಿ. ಕಳೆದ ಹಲವು ವರ್ಷಗಳಿಂದಲೂ ಯಕ್ಷರಂಗದಲ್ಲಿ ಭಾಗವತರಾಗಿ ಮಿಂಚುತ್ತಿರುವ ಪದ್ಯಾಣ ಗಣಪತಿ ಭಟ್ಟರು ವೃತ್ತಿಪರ ಭಾಗವತರಾಗಿ ತೆಂಕಿನಲ್ಲಿ ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿದ ಮೇರು ಕಲಾವಿದ.

ಇವರು ಹಾಡುಗಾರಿಕೆಗೆ ಕುಳಿತ ರೆಂದರೆ ಪ್ರೋತೃಗಳಿಗೆ ರಸದ ಶಣ, ಸಾಹಿತ್ಯ ಪೋಷಣೆ, ಹಿತಮಿತ ರಾಗ ಸಂಯೋಜನೆ, ಸ್ಪಷ್ಟ ಉಚ್ಛಾರದೊಂದಿಗೆ ಸಾಹಿತ್ಯಕ್ಕೆ ಪ್ರಾಧಾನ್ಯತೆ, ತಾಳಶುದ್ಧತೆ, ರಸರಂಜನೆಗೆ ಪೂರಕವಾಗುವ ತಾಳದ ಕಸರತ್ತುಗಳು, ಸ್ವರಗಳ ಸೂಕ್ತ ಏರಿಳಿತ, ದ್ರುತ ವಿಲಂಬಿತ ಕ್ರಮಗಳು, ವಿಶೇಷ ರಾಗಗಳ ಸಮುಚಿತ ಬಳಕೆ, ಪರಂಪರೆಗೆ ಅಡ್ಡವಾದ ಭಾಗವತಿಕೆ ಯೊಂದಿಗೆ ರಂಗನಿರ್ದೇಶನ ಇವೆಲ್ಲವೂ ಪದ್ಯಾಣರನ್ನು ಎತ್ತರಕ್ಕೆ ಏರಿಸಿದ ಅಂಶಗಳು.

ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಪದ್ಯಾಣರು ದುಬೈ, ಮಸ್ಕತ್, ಕುವೈಟ್ ಮೊದಲಾದ ವಿದೇಶಗಳಲ್ಲಿ ಪ್ರದರ್ಶನ ನೀಡಿ ಸಮ್ಮಾನಿತರಾಗಿದ್ದಾರೆ.

ಮುಂಬೈ, ದಿಲ್ಲಿ ಕಾಸರಗೋಡು, ಶಿವಮೊಗ್ಗ, ಮಂಗಳೂರು ಸೇರಿದಂತೆ ನಾಡಿನ ಹಲವೆಡೆ ಅಭಿಮಾನಿಗಳ ಗೌರವ ಸಮ್ಮಾನಗಳನ್ನು ಅವರು ಸ್ವೀಕರಿಸಿದ್ದಾರೆ.

ಈಟಿವಿಯ “ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಯಕ್ಷಗಾನ ಭಾಗವತ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

Leave a Comment

Your email address will not be published. Required fields are marked *