Ad Widget .

ಅಣ್ಣನಿಲ್ಲದ‌ ಸಮಯದಲ್ಲಿ ಅತ್ತಿಗೆಯ ಸರಸಕ್ಕೆ ಎಳೆದ ಮೈದುನ| ದೂರು ದಾಖಲು

Ad Widget . Ad Widget .

ಭೋಪಾಲ್: ಇಲ್ಲಿನ ಮಹಿಳೆಯೊಬ್ಬಳಿಗೆ ಆಕೆಯ ಮೈದುನ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಆತನ ವಿರುದ್ದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಶನಿವಾರ ರಾತ್ರಿ ತನ್ನ ಪತಿ ಇಲ್ಲದಿದ್ದಾಗ ಮೈದುನ ಕಿರುಕುಳ ನೀಡಿರುವುದಾಗಿ ಮಹಿಳೆ ಆರೋಪಿಸಿ ದೂರು ನೀಡಿದ್ದಾಳೆ.

Ad Widget . Ad Widget .

ಪೊಲೀಸರ ಪ್ರಕಾರ, ದೂರುದಾರ ಮಹಿಳೆ ಸುಖಿ-ಸೆವಾನಿಯಾ ನಿವಾಸಿಯಾಗಿದ್ದು, ಶನಿವಾರ ರಾತ್ರಿ ವೃತ್ತಿಯಲ್ಲಿ ಚಾಲಕನಾಗಿರುವ ಪತಿ ಕೆಲಸದ ನಿಮಿತ್ತ ಊರ ಹೊರಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾಳೆ.

ಆಕೆಯ ಮೈದುನ ಪತಿಯನ್ನು ಭೇಟಿಯಾಗಲು ಅವರ ಮನೆಗೆ ಬಂದಿದ್ದ. ಚಾಲಕ ಪತಿ ಕೆಲಸದ ಬೇರೆ ಊರಿಗೆ ಹೋಗಿರುವುದಾಗಿ ಆಕೆ ಹೇಳಿದ್ದಳು. ಆಕೆಯ ಪತಿ ವಾಪಸ್ ಬರುವವರೆಗೂ ಇರಲು ಬಯಸುತ್ತೇನೆ ಎಂದು ಮೈದುನ ಹೇಳಿದ್ದಾನೆ.

ಮಹಿಳೆ ಮಲಗಿದ್ದಾಗ ಮೈದುನ ಆಕೆಯ ಕೊಠಡಿಯೊಳಗೆ ನುಗ್ಗಿದ್ದಲ್ಲದೇ ಆಕೆಯನ್ನು ಅನುಚಿತ ರೀತಿಯಲ್ಲಿ ಸ್ಪರ್ಶಿಸಿದ್ದಾನೆ. ಮಹಿಳೆ ಈ ಕೃತ್ಯದ ವಿರುದ್ಧ ಪ್ರತಿಭಟಿಸಿ ಕೂಗಾಡಿದಾಗ ಮೈದುನ ಪರಾರಿಯಾಗಿದ್ದಾನೆ.

ಇದರ ನಂತರ, ಮಹಿಳೆ ಸುಖಿ-ಸೆವಾನಿಯಾ ಪೊಲೀಸ್ ಠಾಣೆಗೆ ಆರೋಪಿಯ ವಿರುದ್ಧ ದೂರು ನೀಡಲು ಹೋದಳು. ಆಕೆಯ ದೂರಿನ ಆಧಾರದ ಮೇಲೆ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a Comment

Your email address will not be published. Required fields are marked *