Ad Widget .

‘ಸಿನಿಮಾದಲ್ಲಿ ಹುಡುಗರನ್ನೂ ಕಾಸ್ಟಿಂಗ್ ಕೌಚ್ ಅಟ್ಯಾಕ್ ಮಾಡುತ್ತೆ’ – ಅನುಭವ ಬಿಚ್ಚಿಟ್ಟ ಕಿರುತೆರೆ ನಟ

Ad Widget . Ad Widget .

ಮುಂಬೈ: ಕಿರುತೆರೆ ನಟ ಜೀಶಾನ್ ಖಾನ್ ಬಿಗ್ ಬಾಸ್ ಓಟಿಟಿ(Bigg Boss OTT)ಯಲ್ಲಿ ಕಾಣಿಸಿಕೊಂಡ ಬಳಿಕ ಹೆಚ್ಚು ಸುದ್ದಿಯಲ್ಲಿದ್ದಾರೆ. ಜನರು ಸಹ ಜೀಶಾನ್ ಖಾನ್ (Zeeshan Khan) ಅವರನ್ನು ಗುರುತಿಸುತ್ತಿದ್ದಾರೆ. ತಮ್ಮ ಬಣ್ಣದ ಲೋಕದ ಆರಂಭದ ದಿನಗಳ ಬಗ್ಗೆ ಮಾತನಾಡಿರುವ ಜೀಶಾನ್ ಖಾನ್, ತಾನು ಎದುರಿಸಿದ ಕಾಸ್ಟಿಂಗ್ ಕೌಚ್ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

Ad Widget . Ad Widget .

ಬಾಲಿವುಡ್ ನ ಖ್ಯಾತ ನಿರ್ಮಾಣ ಸಂಸ್ಥೆಯ ನಿರ್ದೇಶಕರ ಬಳಿ ಆಡಿಶನ್ ಗೆ ತೆರಳಿದ್ದಾಗ ಆದ ಅನುಭವ ಹಂಚಿಕೊಂಡಿದ್ದು, ‘ನನ್ನನ್ನು ಅವರ ಪ್ರೊಜೆಕ್ಟ್ ಗೆ ಆಯ್ಕೆ ಮಾಡುವ ಮುನ್ನ ಸಭೆ ನಡೆಸುದಾಗಿ ಹೇಳಿದ್ದರು. ನಾನು ಆ ವೇಳೆಗೆ ಒಂದು ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದೆ. ಅದು ನನ್ನ ಎರಡನೇ ಶೋ ಆಗಿತ್ತು. ಹಾಗಾಗಿ ನನ್ನನ್ನು ಆಡಿಶನ್ ಗೆ ಆಹ್ವಾನಿಸಲಾಗಿತ್ತು. ನಿರ್ದೇಶಕರು ನನ್ನನ್ನು ನೋಡುತ್ತಿದ್ದಂತೆ ಇವನು ಕಾಲೇಜಿನ ಹುಡುಗನ ರೀತಿ ಕಾಣಿಸುತ್ತಾನೆ’ ಎಂದಿದ್ದರು.

ಬಳಿಕ ‘ಎಷ್ಟು ಫಿಜಿಕಲಿ ಫಿಟ್ ಆಗಿದ್ದೀಯಾ?’ ಎಂದು ನೋಡಲು ಇಷ್ಟಪಡುತ್ತೇನೆ. ಹಾಗಾಗಿ ನಿನ್ನ ಟೀ ಶರ್ಟ್ ಕಳಚು ಎಂದು ಹೇಳಿದರು. ನಾನು ನಿರ್ದೇಶಕರ ಮಾತಿನಂತೆ ಟಿ ಶರ್ಟ್ ಬಿಚ್ಚಿ ಕಟ್ಟುಮಸ್ತಾದ ದೇಹ ತೋರಿಸಿದೆ. ಆನಂತರ ನಾನು ನಿನ್ನ ಕಾಲುಗಳನ್ನು ನೋಡಬೇಕು. ಬಹಳಷ್ಟು ಜನ ಕೇವಲ ದೇಹವನ್ನು ಮಾತ್ರ ಫಿಟ್ ಆಗಿ ಇಟ್ಟುಕೊಳ್ಳುತ್ತಾರೆ. ಕಾಲುಗಳತ್ತ ಗಮನ ನೀಡಲ್ಲ. ಲೋವರ್ ಬಾಡಿಯನ್ನು ನಾವು ಗಮನಿಸಬೇಕು ಎಂದು ಹೇಳುತ್ತಿದ್ದಂತೆ ನಾನು ಮಧ್ಯಪ್ರವೇಶಿಸಿ ಅವರ ಮಾತುಗಳಿಗೆ ಬ್ರೇಕ್ ಹಾಕಿದ್ದೆ. ನನಗೆ ಅಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಖಾತ್ರಿಯಾಗಿತ್ತು, ನಾನು ಅಂತ ಹುಡುಗನಲ್ಲ, ಇಂತಹ ವಿಷಯಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾರೆ ಎಂದು ಹೇಳಿ ಹೊರಡಲು ಸಿದ್ಧರಾಗುತ್ತಿದ್ದಂತೆ ನಿರ್ದೇಶಕರು, ಈ ಸ್ಥಾನದಲ್ಲಿ ಬಂದು ಕುಳಿತವರು ಏನಾಗಿದ್ದಾರೆ ಎಂಬುವುದು ನಿನಗೆ ಗೊತ್ತಿದೆ ಎಂದು ಹೇಳುತ್ತಾ ಹಲವು ನಟಿಯರ ಹೆಸರು ಹೇಳಿದರು. ಆದ್ರೆ ಇದ್ಯಾವುದನ್ನ ಒಪ್ಪಿಕೊಳ್ಳದ ನಾನು ಹೊರಬಂದೆ’ ಎಂದು ಜೀಶಾನ್ ಹೇಳಿಕೊಂಡಿದ್ದಾರೆ.

Leave a Comment

Your email address will not be published. Required fields are marked *