ಸುಳ್ಯ: ಲವ್ ಜಿಹಾದ್ ಬಲೆಯೊಳಗೆ ಬಿದ್ದ ಹಿಂದೂ ಯುವತಿ ಇದೀಗ ಅದರಿಂದ ಹೊರಬರಲಾರದೆ ಮತ್ತೆ ಪ್ರತಿಭಟನೆಗೆ ಮುಖ ಮಾಡಿರುವ ಘಟನೆ ನಡೆದಿದ್ದು, ಪ್ರಕರಣ ಹೊಸ ರೂಪಕ್ಕೆ ತಿರುಗಿದೆ.
ಲವ್ ಜಿಹಾದ್ ನಲ್ಲಿ ಸಿಲುಕಿಸಿ, ಮದುವೆಯಾಗಿ ಬಳಿಕ ಮತಾಂತರಗೊಳಿಸಿ ಲಕ್ಷಾಂತರ ರೂಪಾಯಿ ದೋಚಿದ ನಂತರ ನಾಪತ್ತೆಯಾಗಿರುವ ತನ್ನ ಗಂಡನಿಗಾಗಿ ಕಾದು ಕುಳಿತಿರುವ ಆಸಿಯಾ ಅಲಿಯಾಸ್ ಶಾಂತಿಜೂಬಿ ನ್ಯಾಯಕ್ಕಾಗಿ ಮತ್ತೆ ಪ್ರತಿಭಟನೆ ದಾರಿ ಹಿಡಿದಿದ್ದು, ಇದರ ಬೆನ್ನಲ್ಲೇ ಹಿಂದೂ ಮಹಾಸಭಾ ಕರ್ನಾಟಕ ಸಂತ್ರಸ್ತ ಮಹಿಳೆಯ ಬೆನ್ನಿಗೆ ನಿಂತಿದೆ.
ಏನಿದು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರಸಿದ್ದ ಕಟ್ಟೆಕಾರ್ ಮನೆತನದ ಇಬ್ರಾಹಿಂ ಕಟ್ಟೆಕ್ಕಾರ್ ಎಂಬಾತ ಕೇರಳದ ಪ್ರತಿಷ್ಠಿತ ಹಿಂದು ಕುಟುಂಬದ ಶಾಂತಿ ಜೂಬಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ. ನಂತರ ಆಕೆಯನ್ನು ಪುಸಲಾಯಿಸಿ ನಕಲಿ ಪ್ರೇಮ, ಪ್ರೀತಿಯ ಬಲೆಗೆ ಬೀಳಿಸಿದ್ದ ವಿಚಾರ ಬಹಳ ಸಮಯದ ಹಿಂದೆಯೇ ಬೆಳಕಿಗೆ ಬಂದಿತ್ತು. ಲವ್ ಜಿಹಾದ್ ನಲ್ಲಿ ಯಶಸ್ವಿಯಾದ ನಂತರ ಮತಾಂತರದ ಉದ್ದೇಶದಿಂದ
ಆರೋಪಿ ಇಬ್ರಾಹಿಂ ಕಟ್ಟೆಕ್ಕಾರ್ ಎಂಬಾತ ಶಾಂತಿ ಜೂಬಿಯನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದು, ಶಾಂತಿ ಆಸಿಯಾ ಆಗಿ ಬದಲಾಗಿದ್ದಳು. ಮತಾಂತರ ಬಳಿಕ ಇಬ್ರಾಹಿಂ ಕಲೀಲ್ ಆಕೆಗೆ ಕಿರುಕುಳ ನೀಡಿ ಆಕೆಯ ಲಕ್ಷಾಂತರ ರೂಪಾಯಿ ದೋಚಿ ಕಳೆದ ಜನವರಿ 2020 ರಿಂದ ಸುಳ್ಯದಿಂದ ಪರಾರಿಯಾಗಿದ್ದ.
ಇದರಿಂದ ಸಂಕಷ್ಟಕ್ಕೊಳಗಾದ ಸಂತ್ರಸ್ತೆ ಮಹಿಳೆಯು ಮೊಹಿದ್ದೀನ್ ಜಾಮಾ ಮಸೀದಿ ಸುಳ್ಯ, ಕಾಂಗ್ರೆಸ್ ಮುಖಂಡರು, ಎಸ್ಡಿಪಿಐ ಮುಖಂಡರು, ಜಮಾತ್, ಮೌಲಾನಗಳು, ಮುಸ್ಲಿಂ ಒಕ್ಕೂಟ ಹಾಗೂ ಇತರ ಮುಸ್ಲಿಂ ಸಂಘಟನೆಗಳ ನೆರವು ಪಡೆಯಲು ಹಲವು ತಿಂಗಳುಗಳಿಂದ ಹರ ಸಾಹಸ ಪಟ್ಟರೂ ಯಶ ಕಾಣಲಿಲ್ಲ. ಕಳೆದ ಡಿಸೆಂಬರ್ ತಿಂಗಳಲ್ಲಿ ಹನಿ ಹಿಂದುಸ್ತಾನಿ ಮುಂಬೈರವರ ಮುಂದಾಳತ್ವದಲ್ಲಿ ಮಹಿಳೆಯನ್ನು ಇಬ್ರಾಹಿಂ ಕಟ್ಟೆಕ್ಕಾರ್ ಅವರ ಮನೆಗೆ ಸೇರಿಸಿದ್ದು ಕೆಲವು ದಿನಗಳ ನಂತರ ಇಬ್ರಾಹಿಂ ಅನುಪಸ್ಥಿತಿಯಲ್ಲಿ ಕಟ್ಟೆಕ್ಕಾರ್ ಕುಟುಂಬ ಸೊಸೆಯ ಬಗ್ಗೆ ಒಂದು ನಿರ್ಣಯಕ್ಕೆ ಬಂದು ಓಡಿ ಹೋದ ಇಬ್ರಾಹಿಂ ಕಟ್ಟೆಕ್ಕಾರ್ ನನ್ನು ತಿಂಗಳೊಳಗೆ ಕರೆ ತರುವ ಭರವಸೆಯೊಂದಿಗೆ ಅಷ್ಟರವರೆಗೆ ಅಸಿಯಾಳನ್ನು ಬೇರೆ ಬಾಡಿಗೆ ಮನೆಯಲ್ಲಿ ಇರುವಂತೆ ಮಾಡಿದ್ದರು. ಇದೀಗ ಏಳೆಂಟು ತಿಂಗಳಾದರೂ ಪತಿ ಇಬ್ರಾಹಿಂ ಕಟ್ಟೆಕ್ಕಾರ್ ಅಥವಾ ಕುಟುಂಬದವರ ಯಾವುದೇ ಉತ್ತರವಿಲ್ಲದಿರುವುದರಿಂದ ಇಂದು ಮತ್ತೊಮ್ಮೆ ಆಸಿಯಾ (ಶಾಂತಿ ಜೂಬಿ) ಕಟ್ಟೆಕಾರ್ ರವರ ಸುಳ್ಯದ ಚಪ್ಪಲಿ ಅಂಗಡಿಯೊಳಗೆ ಮತ್ತೆ ಪ್ರತಿಭಟನೆ ಆರಂಭಿಸಿದ್ದಾಳೆ.
ಇದೀಗ ಆಸಿಯಾಳಿಗೆ ಹಿಂದೂಹಾ ಸಭಾ ನೈತಿಕ ಬೆಂಬಲ ನೀಡಿದ್ದು, ವಾರದೊಳಗೆ ಮತಾಂಧ ಇಬ್ರಾಹಿಂ ಕಟ್ಟೆಕ್ಕಾರ್ ತಲಾಖ್ ಮತ್ತು ಪರಿಹಾರ ಮೊತ್ತ 50 ಲಕ್ಷ ಕಟ್ಟೆಕ್ಕಾರ್ ಕುಟುಂಬಸ್ಥರು ನೀಡದಿದ್ದರೆ ಆ ಕುಟುಂಬದ ವಿರುದ್ಧ ಉಗ್ರ ಹೋರಾಟ ನಡೆಸಲು ಯೋಚಿಸಿದೆ. ಮುಂದಿನ ದಿನಗಳಲ್ಲಿ ಸುಳ್ಯದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತ ಮತ್ತು ಕಟ್ಟೆಕ್ಕಾರ್ ಕುಟುಂಬ ನೇರ ಹೊಣೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ, ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಲೋಹಿತ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಲವ್ ಜಿಹಾದ್ ನ ಬಲೆಗೆ ಬಿದ್ದ ಶಾಂತಿಯ ಮನಶಾಂತಿ ಹಾಳಾಗಿರುವುದು, ಕಟ್ಟೆಕಾರ್ ಕುಟುಂಬಕ್ಕೂ ಇದು ತಲೆನೋವಾಗಿ ಪರಿಣಮಿಸಿರುವುದು ಸುಳ್ಳಲ್ಲ.