Ad Widget .

ಅಣ್ಣನ ಮಗಳ ಬೆತ್ತಲೆ ಫೋಟೋ ಸೆರೆಹಿಡಿದು ಲೈಂಗಿಕ ಕಿರುಕುಳ ನೀಡಿದ ಕಾಮಿ ಚಿಕ್ಕಪ್ಪ| ಪೊಲೀಸರಿಂದ ಆರೋಪಿ ಬಂಧನ

Ad Widget . Ad Widget .

ಶಿವಮೊಗ್ಗ: ಅಣ್ಣನ ಪುತ್ರಿಯ ಬೆತ್ತಲೆ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಲೈಂಗಿಕ ಕಿರುಕುಳ ಕೊಟ್ಟಿರುವ ಪಾಪಿ ಚಿಕ್ಕಪ್ಪನೀಗ ಪೊಲೀಸ್ ಅತಿಥಿಯಾಗಿದ್ದಾನೆ.

Ad Widget . Ad Widget .

ಸೊರಬ ತಾಲೂಕಿನಲ್ಲಿ ಪಾಪಿ ಚಿಕ್ಕಪ್ಪನೋರ್ವ ಈ ರೀತಿಯ ವಿಕೃತಿ ಮೆರೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತೇಜಪ್ಪ(38) ಎಂಬಾತನೇ ಮಗಳ ಸಮಾನಳಾದ ಅಣ್ಣನ ಪುತ್ರಿಯ ಮೇಲೆ ಕಣ್ಣು ಹಾಕಿದ ಆರೋಪಿ. ಅಲ್ಲದೆ ಆಕೆಯ ಬೆತ್ತಲೆ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಮಾಡಿ ವಿಕೃತಿ ಮೆರೆದಿದ್ದಾನೆ.

ಆರೋಪಿ ತೇಜಪ್ಪ 3 ದಿನಗಳ ಹಿಂದೆ ಈತ ಅಣ್ಣನ ಪುತ್ರಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ಈ ಸಂದರ್ಭ ಅಪ್ರಾಪ್ತ ಬಾಲಕಿಯ ಬೆತ್ತಲೆ ಅಶ್ಲೀಲ‌ ದೃಶ್ಯವನ್ನು ಚಿತ್ರೀಕರಣ ಮಾಡಿದ್ದಾನೆ. ಬಳಿಕ ಆತ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನೂ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಬಳಿಕ ಈ ಎಲ್ಲಾ ವೀಡಿಯೋಗಳನ್ನೂ ಸಾಮಾಜಿಕ‌ ಜಾಲತಾಣದಲ್ಲಿ‌ ಅಪ್ಲೋಡ್ ಮಾಡಿದ್ದಾನೆ.

ಪ್ರಕರಣ‌ ಬಯಲಿಗೆ ಬರುತ್ತಿದ್ದಂತೆ ಆರೋಪಿ ತೇಜಪ್ಪ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಪಿಐ ಮರುಳಸಿದ್ದಪ್ಪ ಹಾಗೂ ಪಿಎಸ್​ಐ ಪ್ರಶಾಂತ್ ನೇತೃತ್ವದ ತಂಡ ರಚಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌‌. ಈ ಬಗ್ಗೆ ತನಿಖೆ ಮುಂದುವರಿದಿದೆ.

Leave a Comment

Your email address will not be published. Required fields are marked *