ಕೆರೆಗೆ ಹಾರಿ‌ ಯುವತಿ ಆತ್ಮಹತ್ಯೆ

Ad Widget ... ..

ವಿಟ್ಲ: ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ಇಂದು ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕರವರ ಮಗಳು ನಿಶ್ಮಿತಾ(22) ಎಂದು ಗುರುತಿಸಲಾಗಿದೆ.

Ad Widget

ಈಕೆ ಡೆಂಟಲ್ ಕ್ಲಿನಿಕ್’ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ಸಂಜೆಯಿಂದ ನಿಶ್ಮಿತಾ ಕಾಣೆಯಾಗಿದ್ದರು. ಇಂದು ಮುಂಜಾನೆ ಕೆರೆಯಲ್ಲಿ ನಿಶ್ಮಿತಾ ರವರ ಮೃತದೇಹ ಪತ್ತೆಯಾಗಿದ್ದು, ಡೆತ್ ನೋಟ್ ಮತ್ತು ಮೊಬೈಲ್ ಕೂಡ ಮೃತದೇಹ ದೊರೆತ ಸ್ಥಳದಲ್ಲಿ ಪತ್ತೆಯಾಗಿದೆ.ಇನ್ನು ಡೆತ್ ನೋಟ್’ನಲ್ಲಿ ಕೆಲವರ ಹೆಸರು ಉಲ್ಲೇಖವಿದೆ ಅಂತ ಹೇಳಲಾಗುತ್ತಿದ್ದು,
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.ಆದರೆ ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

Leave a Comment

Your email address will not be published. Required fields are marked *