ಬಂಟ್ವಾಳ: ಇಲ್ಲಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಅಪ್ರಾಪ್ತೆ ಬಾಲಕಿಯೊಬ್ಬಳಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಅಪ್ರಾಪ್ತೆ ಬಾಲಕಿ ಮೇಲೆ ಐವರು ಕಾಮುಕರಿಂದ ಗ್ಯಾಂಗ್ ರೇಪ್ ಕೃತ್ಯ ನಡೆದಿದ್ದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಬಂಟ್ವಾಳದ ಎಸ್ ವಿ ಎಸ್ ಶಾಲೆಯ ಆಟೋ ಸ್ಟಾಂಡ್ ನಲ್ಲಿ ನಿಂತಿದ್ದ ಬಾಲಕಿಗೆ ಅಮಲು ಹತ್ತಿಸುವ ಚಾಕಲೇಟ್ ನೀಡಿ ಅಪಹರಿಸಸಲಾಗಿದೆ. ಬಳಿಕ ಆಕೆಯನ್ನು ಬಂಟ್ವಾಳದ ಅಮ್ಟಾಡಿಯ ರೂಂ ಒಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಬಾಲಕಿ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೋಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.