Ad Widget .

ಯಮಕಿಂಕರನಾದ ರಸ್ತೆ ಗುಂಡಿ| ಟಿಪ್ಪರ್ ಹರಿದು ಮಹಿಳೆ‌ ಸಾವು

Ad Widget . Ad Widget .

ಬೆಂಗಳೂರು: ರಸ್ತೆ ಗುಂಡಿಗಳಿಂದ ರಾಜಧಾನಿ ಬೆಂಗಳೂರು ಮಂದಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ಮಧ್ಯೆ, ಅಲ್ಲಲ್ಲಿ ಗುಂಡಿಗಳು ಮಾರಕವಾಗಿದ್ದು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಖುದ್ದು ಹೈಕೋರ್ಟೇ ಆದೇಶಿಸಿದ್ದರೂ ಬಿಬಿಎಂಪಿ ಎಚ್ಚೆತ್ತಿಲ್ಲ. ಇದೀಗ ಈ ಗುಂಡಿಗೆ ಅಮಾಯಕ ಮಹಿಳೆಯೊಬ್ಬರು‌ ಬಲಿಯಾಗಿದ್ದಾರೆ.

Ad Widget . Ad Widget .

ರಸ್ತೆಗುಂಡಿಯ‌ನ್ನು ತಪ್ಪಿಸಲು ಪಕ್ಕಕ್ಕೆ ಸರಿದ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಮಹಿಳೆಯ ಮೇಲೆ ಟಿಪ್ಪರ್ ಲಾರಿ ಹರಿದು, ಮಹಿಳೆ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಈ ದುರಂತ ನಡೆದಿದೆ. ಮೊನ್ನೆ ಇದೇ ರಸ್ತೆಯಲ್ಲಿ ಟಿಪ್ಪರ್ ಹರಿದು ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿದ್ದರು. ಒಂದೇ ಕುಟುಂಬದ ಮೂವರು ಬೈಕ್ ಮೇಲೆ ಬರುತ್ತಿದ್ದರು. ಆ ವೇಳೆ ರಸ್ತೆ ಗುಂಡಿ ಕಂಡು ವಾಹನವನ್ನು ಪಕ್ಕಕ್ಕೆ ತಿರುಗಿಸಿದಾಗ ಟಿಪ್ಪರ್ ಲಾರಿ ಮಹಿಳೆಯ ಮೇಲೆ ಹರಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕ್ ನಲ್ಲಿದ್ದ ಇನ್ನಿಬ್ಬರಿಗೂ ಗಂಭೀರ ಗಾಯಗಳಾಗಿವೆ.

Leave a Comment

Your email address will not be published. Required fields are marked *