ದಸರಾ ಬಳಿಕ ರಾಜ್ಯದಲ್ಲಿ 1ನೇ ತರಗತಿಯಿಂದಲೇ‌ ಶಾಲಾರಂಭ – ಸಚಿವ ಬಿ.ಸಿ ನಾಗೇಶ್

Ad Widget ... ..

ಮಂಗಳೂರು : ರಾಜ್ಯದಲ್ಲಿ ಈಗಾಗಲೇ 6 ರಿಂದ 12ನೇ ತರಗತಿ ಶಾಲಾ ಕಾಲೇಜುಗಳು ಆರಂಭಗೊಂಡಿವೆ. ಆದರೆ 1 ರಿಂದ 5ನೇ ತರಗತಿಗಳು ಆರಂಭಗೊಂಡಿಲ್ಲ. ಈ ಶಾಲೆಗಳು ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ಮುಹೂರ್ತವನ್ನು ರಾಜ್ಯ ಸರ್ಕಾರ ಫಿಕ್ಸ್ ಮಾಡಿದೆ.

Ad Widget

ದಸರಾ ಬಳಿಕ 1 ರಿಂದ 5ನೇ ತರಗತಿಗಳನ್ನು ಆರಂಭಿಸೋದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಈ ಕುರಿತಂತೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದುವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಹಾಜರಾತಿ ಕಡ್ಡಾಯಗೊಳಿಸಿಲ್ಲ. ಇದೀಗ ದಸರಾ ಮುಗಿದ ತಕ್ಷಣ 1 ರಿಂದ 5ನೇ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಅವರಿಗೂ ಕಡ್ಡಾಯವಿಲ್ಲ ಎಂದರು.

ಶಾಲೆ ಆರಂಭಗೊಂಡರೂ ಆಫ್ ಲೈನ್, ಆನ್ ಲೈನ್ ತರಗತಿಗಳು ನಡೆಯಲಿವೆ. ಗ್ರಾಮೀಣ ಭಾಗದಲ್ಲಿ ಶೇ.90ರಷ್ಟು ಹಾಜರಾತಿ ಇದೆ. ಆನ್ ಲೈನ್ ಕ್ಲಾಸ್ ನಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಕೂಡ ಆಗಿದೆ. ಹೀಗಾಗಿ ದಸರಾ ಮುಗಿದ ತಕ್ಷಣ ಶಾಲೆಗಳು ಆರಂಭಿಸುತ್ತೇವೆ. ಬಿಸಿಯೂಟ ಕೂಡ ಪ್ರಾರಂಭಿಸುವುದಾಗಿ ತಿಳಿಸಿದರು.

Leave a Comment

Your email address will not be published. Required fields are marked *