ನವದೆಹಲಿ: ಕಳೆದ ಸೆಪ್ಟೆಂಬರ್ 17ರಂದು ಆರಂಭವಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಗೊರೆಗಳ ಇ – ಹರಾಜಿಗೆ ಅಕ್ಟೋಬರ್ 7ರಂದು ತೆರೆ ಬಿದ್ದಿದೆ. ಈ ಹರಾಜಿನಲ್ಲಿ ಸರ್ದಾರ್ ಪಟೇಲ್ ಅವರ ಶಿಲ್ಪಕಲೆಗೆ ಅತಿಹೆಚ್ಚು ಬಿಡ್‌ಗಳು ನಡೆದಿವೆ ಮತ್ತು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ನೀರಜ್ ಚೋಪ್ರಾ ಅವರ ಜಾವೆಲಿನ್ ಅತಿ ದೊಡ್ಡ ಮೊತ್ತಕ್ಕೆ ಹರಾಜಾಗಿದೆ.
ಸರ್ದಾರ್ ಪಟೇಲ್ ಶಿಲ್ಪಕಲೆಯು 140 ಬಿಡ್‌ಗಳನ್ನು ಪಡೆದುಕೊಳ್ಳುವುದರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಗೊರೆಗಳ ಇ – ಹರಾಜಿನಲ್ಲಿ ಅತಿ ಹೆಚ್ಚು ಬಿಡ್‌ಗಳನ್ನು ಪಡೆದುಕೊಂಡ ಉಡುಗೊರೆ ಎನಿಸಿಕೊಂಡರೆ, ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಜಾವೆಲಿನ್ ಬರೋಬ್ಬರಿ 1.5 ಕೋಟಿ ರೂ. ಗೆ ಹರಾಜಾಗಿದೆ.