Ad Widget .

‘ಟಾರ್ಗೆಟ್ ಹಿಂದೂಸ್’ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಹಿಂದೂ ವಿರೋಧಿ ಪೋಸ್ಟಿಂಗ್| ಮತ್ತೆ ಬಾಲ ಬಿಚ್ಚಿದ ಕಿಡಿಗೇಡಿಗಳು

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಂಗಳೂರು: ಚೈತ್ರಾ ಕುಂದಾಪುರ ಹಾಗೂ ತುಳುವರ ಆರಾಧ್ಯ ದೈವ ಕೊರಗಜ್ಜನನ್ನು ತೀರಾ ತುಚ್ಚ ರೀತಿಯಲ್ಲಿ, ಅಶ್ಲೀಲವಾಗಿ ನಿಂದಿಸುವ ಮೂಲಕ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಅವಮಾನ ಮಾಡಲಾಗಿದ್ದ ಪೇಜ್ ನಿಷ್ಕ್ರಿಯಗೊಂಡ ಬೆನ್ನಲ್ಲೇ ಮತ್ತೊಂದು ಪೇಜ್ ನಲ್ಲಿ ಹಿಂದೂ ವಿರೋಧಿ ಪೋಸ್ಟಿಂಗ್ ಮಾಡಲಾಗಿದೆ. ಕಿಡಿಗೇಡಿಗಳು ಮತ್ತದೇ ಚಾಳಿ‌ ಮುಂದುವರೆಸಿದ್ದು, ಈ ಹೊಲಸು ರೆಕಾರ್ಡಿಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಜೊತೆಗೆ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Ad Widget . Ad Widget . Ad Widget .

ಟಾರ್ಗೆಟ್ ಹಿಂದೂಸ್’ ಎಂಬ ಪ್ರೊಫೈಲ್ ಫೋಟೋ ಇಟ್ಟುtarget-hindus’ ಎಂಬ ಹೆಸರಲ್ಲಿ ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆಯಲಾಗಿದ್ದು, ಇದರಲ್ಲಿ ಹಿಂದೂ ಧರ್ಮ ಹಾಗೂ ಹಿಂದೂ ಧಾರ್ಮಿಕ ‌ಮುಖಂಡರನ್ನು ತೀರಾ ತುಚ್ಚ ರೀತಿಯಲ್ಲಿ ನಿಂದಿಸಲಾಗಿದೆ. ಅಲ್ಲದೆ ಇದರಲ್ಲಿ‌ ಚೈತ್ರಾ ಕುಂದಾಪುರ ಹಾಗೂ ಶಿವಾಜಿ‌ ಮಹಾರಾಜ್ ಅವರನ್ನು ನಿಂದಿಸಲಾಗಿದ್ದು, ಚೈತ್ರಾ ಭಾಷಣದ ವಿಡಿಯೋದ ಆಡಿಯೋವನ್ನು ಮ್ಯೂಟ್ ಮಾಡಿಕೊಂಡು ಅದರ ಬದಲಿಗೆ ಬ್ಯಾರಿ ಭಾಷೆಯಲ್ಲಿ ಅಶ್ಲೀಲದ ಆಡಿಯೋ ಅಟ್ಯಾಚ್ ಮಾಡಿ ನಿಂದಿಸಲಾಗಿದೆ.

ಶಿವಾಜಿ ಮಹಾರಾಜರ ಫೋಟೋವನ್ನಿಟ್ಟುಕೊಂಡು ಅವರಿಗೂ ಅವಮಾನ ಮಾಡಲಾಗಿದ್ದಲ್ಲದೆ ನಾಯಿಯೊಂದು ಅವರ ಮುಖಕ್ಕೆ ಮೂತ್ರ ಮಾಡುವಂತೆ ಚಿತ್ರಿಸಲಾಗಿದೆ. ಅದಲ್ಲದೆ ಪ್ರಮೋದ್ ಮುತಾಲಿಕರ ಭಾಷಣದ ಮಾಡಿದ ನ್ಯೂಸ್‍ನ ಸ್ಕ್ರೀನ್ ಶಾಟ್ ಬಳಸಿಕೊಂಡು ಅವರನ್ನೂ ನಿಂದಿಸಲಾಗಿದೆ.

ಪ್ರತೀದಿನ‌ ಇಂತಹ ಹೊಸ ಪೇಜ್ ಗಳು ಹುಟ್ಟಿಕೊಂಡಿದ್ದು, ಹೊಸ ಹೊಸ ವಿವಾದ ಎಬ್ಬಿಸುತ್ತಿವೆ. ಜಿಲ್ಲೆಯ ಜನತೆಯಲ್ಲಿ ಕೋಮು ವಿರೋಧಿ ಭಾವನೆಯನ್ನು ಸೃಷ್ಟಿಸುತ್ತಿದ್ದು, ಸೌಹಾರ್ದತೆಯನ್ನು ಕೆಡಿಸುವ ಹುನ್ನಾರ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಸಿದ ದುಷ್ಕರ್ಮಿಗಳ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹ ಕೇಳಿಬಂದಿದೆ.

Leave a Comment

Your email address will not be published. Required fields are marked *