Ad Widget .

ಗಡಿಯಲ್ಲಿ ಭಾರತ-ಚೀನಾ ಮುಖಾಮುಖಿ| ಚೀನೀ ಸೇನೆಗೆ ಬಿಸಿಮುಟ್ಟಿಸಿದ ಇಂಡಿಯನ್ ಆರ್ಮಿ|

Ad Widget . Ad Widget .

ಅರುಣಾಚಲ : ಭಾರತ ಮತ್ತು ಚೀನಾ ಪಡೆಗಳು ಕಳೆದ ವಾರ ಮತ್ತೊಂದು ಮುಖಾಮುಖಿಯಲ್ಲಿ ತೊಡಗಿದ್ದು, ಇದರಲ್ಲಿ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಸಮೀಪದಲ್ಲಿ ಸುಮಾರು 200 ಪಿಎಲ್ ಎ ಸೈನಿಕರನ್ನು ತಡೆಹಿಡಿಯಲಾಗಿದೆ.

Ad Widget . Ad Widget .

ಕಳೆದ ವಾರ ಚೀನಾದ ಗಡಿಗೆ ಹತ್ತಿರವಿರುವ ವಾಡಿಕೆಯ ಗಸ್ತು ಸಂದರ್ಭದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವಿನ ಮುಖಾಮುಖಿ ಸಂಭವಿಸಿದೆ. ಗಡಿಗೆ ಹತ್ತಿರದಲ್ಲಿ ಸುಮಾರು 200 ಚೀನೀ ಸೈನಿಕರನ್ನು ಭಾರತೀಯ ಪಡೆಗಳು ತಡೆದಿವೆ ಎಂದು ಮೂಲಗಳು ತಿಳಿಸಿವೆ.

ಉಭಯ ಪಡೆಗಳ ಕಮಾಂಡರ್‌ಗಳು ವಿಚಾರವನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಅನ್ವಯ ಬಗೆಹರಿಸಿಕೊಂಡ ನಂತರದಲ್ಲಿ ಎರಡೂ ದೇಶಗಳ ಪಡೆಗಳು ಹಿಂದಿರುಗಿವೆ. ಕೆಲವು ಗಂಟೆಗಳ ವರೆಗೂ ಭಾರತ-ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದೆ, ಆದರೆ ಘರ್ಷಣೆಯಲ್ಲಿ ಭಾರತದ ಪಡೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಚೀನಾದ ಕಡೆಯಿಂದ ಆಕ್ರಮಣಕಾರಿ ಮತ್ತು ಏಕಪಕ್ಷೀಯ ಧೋರಣೆಗಳು ಗಡಿಯಲ್ಲಿ ಶಾಂತಿ ಮತ್ತು ಪ್ರಶಾಂತತೆಗೆ ಧಕ್ಕೆಯುಂಟು ಮಾಡುತ್ತದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್‌ ಬಗಚಿ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜಯಶಂಕರ್ ಅವರು ಇತ್ತೀಚೆಗಷ್ಟೇ ತಜಕಿಸ್ತಾನದಲ್ಲಿ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್‌ ಯಿ ಅವರನ್ನು ಭೇಟಿ ಮಾಡಿ, ಭಾರತದ ನಿಲುವು ಸ್ಪಷ್ಟಪಡಿಸಿದ್ದರು.

Leave a Comment

Your email address will not be published. Required fields are marked *