Ad Widget .

ದಸರಾ ಜಂಬೂಸವಾರಿ|ಮದವೇರಿದ ವಿಕ್ರಮನಿಗೆ ಗೇಟ್‌ಪಾಸ್..!

Ad Widget . Ad Widget .

ಮಂಡ್ಯ: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಂದು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ವಿಕ್ರಮನಿಗೆ ಮದವೇರಿದ ಕಾರಣ ಈ ಬಾರಿಯ ಮೆರವಣಿಗೆಯಿಂದ ಗೇಟ್‌ಪಾಸ್ ಆಗಿದ್ದಾನೆ.
ಮೈಸೂರಿಗೆ ದಸರಾ ನೋಡಲು ಬರುವ ಜನರಿಗೆ ಅಂಬಾರಿ ಹೊರುವ ಆನೆಗಳಾದ ಅರ್ಜುನನ್ನು ಮತ್ತು ವಿಕ್ರಮನನ್ನು ಕಂಡರೆ ಅಚ್ಚು-ಮೆಚ್ಚು. ಅದಲ್ಲದೆ ಕಳೆದ ಐದು ವರ್ಷಗಳಿಂದ ಸತತವಾಗಿ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಜರುಗುವ ಖಾಸಗಿ ದಬಾರ‍್ನ ಪೂಜಾ ವಿಧಿ ವಿಧಾನಗಳಲ್ಲಿ ಪಟ್ಟದ ಆನೆಯಾಗಿ ಜವಾಬ್ದಾರಿ ಹೊತ್ತಿದ್ದ ವಿಕ್ರಮ ಆನೆಗೆ ಇದೀಗ ಮದವೇರಿರುವ ಕಾರಣ ಈ ಬಾರಿಯ ದಸರಾ ಮಹೋತ್ಸವದ ಕಾರ್ಯಕ್ರಮದಿಂದ ದೂರ ಉಳಿಸಲಾಗಿದೆ.

Ad Widget . Ad Widget .

ವಿಕ್ರಮನ ಬದಲಿಗೆ ಗೋಪಾಲಸ್ವಾಮಿ ಆನೆಗೆ ಪಟ್ಟದ ಆನೆಯ ಸ್ಥಾನವನ್ನು ಈ ಬಾರಿ ನೀಡಲಾಗಿದೆ. ೫೮ ವರ್ಷದ ವಿಕ್ರಮ ಶರೀರದ ಎತ್ತರ ೨.೮೯ ಮೀಟರ್ ಇದ್ದು, ೩.೪೩ ಮೀಟರ್ ಉದ್ದ, ೩,೮೨೦ ಕೆ.ಜಿ ತೂಕವಿರುವ ವಿಕ್ರಮ ಕಳೆದ ೧೮ ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾನೆ. ಇಲ್ಲಿಯವರೆಗೆ ಬಹಳ ಸೌಮ್ಯ ಸ್ವಭಾವದ ಆನೆ ಎಂಬ ಹೆಗ್ಗಳಿಕೆ ಹೊಂದಿದ್ದ ವಿಕ್ರಮನಿಗೆ ಇದೀಗ ಮದವೇರಿರುವ ಕಾರಣ ಬಹಳ ಕೋಪದಿಂದ ವರ್ತನೆ ಮಾಡುತ್ತಿದ್ದಾನೆ. ಈ ಮದ ಇಳಿಯಬೇಕು ಎಂದರೆ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬೇಕು. ಹೀಗಾಗಿ ಇವನನ್ನು ಪ್ರತ್ಯೇಕವಾಗಿ ಅರಮನೆಯ ಆವರಣದಲ್ಲಿ ಕಟ್ಟಿಹಾಕಲಾಗಿದೆ.

ಗಜೇಂದ್ರನಿಂದ ತೆರವಾದ ಪಟ್ಟದ ಆನೆ ಸ್ಥಾನವನ್ನು ೨೦೧೫ರಿಂದಲೂ ವಿಕ್ರಮ ನಿಭಾಯಿಸುತ್ತಿದ್ದು, ತನ್ನ ಸೌಮ್ಯ ಸ್ವಭಾವದಿಂದಲೇ ಮನ್ನಣೆಗಳಿಸಿದೆ. ಮದ ಇದ್ದರೂ ವರ್ತನೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ, ಸಾಮಾನ್ಯ ಸ್ಥಿತಿಯಲ್ಲಿರುವಂತೆ ವರ್ತಿಸುತ್ತಿದೆ. ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ, ಪಶುವೈದ್ಯರು, ಮಾವುತ, ಕಾವಾಡಿಗಳಿಗೂ ಸಮಾಧಾನವನ್ನುಂಟು ಮಾಡಿದೆ. ವಿಕ್ರಮನಿಗೆ ಅತ್ಯಂತ ಸಣ್ಣ ಪ್ರಮಾಣದಲ್ಲಿ ಮದ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಮಾವುತರು ಅಭಿಪ್ರಾಯಪಟ್ಟಿದ್ದಾರೆ.

ವಿಕ್ರಮನಿಗೆ ಸದ್ಯ ಸ್ಪಲ್ಪ ಪ್ರಮಾಣದಲ್ಲಿ ಮದ ಇದ್ದರು ಕಾರಣ ಗಂಡಾನೆ ಹತ್ತಿರ ಬಂದಾಗ ಹಾಗೂ ಶಬ್ದ ಕೇಳಿದಾಗ ಗಲಾಟೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರ ಮದವನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಕ್ರಮನಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ಇದರ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಇದಕ್ಕೆ ಪ್ರತಿ ದಿನ ನಾಲ್ಕು ಬಾರಿ ತಣ್ಣೀರಿನಲ್ಲಿ ಸ್ನಾನ ಮಾಡಿಸಿ, ಕುಸಲ್ಕಿ, ಮೊಸರನ್ನಾ ಈ ರೀತಿಯಾ ತಂಪಾದ ಆಹಾರ ಪದಾರ್ಥಗಳನ್ನು ನೀಡಲಾಗುತ್ತದ್ದು, ಬೇರೆ ಆನೆಗಳಿಗೆ ಕೊಡುತ್ತಿರುವ ಆಹಾರ ಪದಾರ್ಥಗಳನ್ನು ಈ ಆನೆಗೆ ನೀಡುತ್ತಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.

Leave a Comment

Your email address will not be published. Required fields are marked *