Ad Widget .

ಹೆತ್ತ ಮಕ್ಕಳಿಗೆ ‌ವಿಷಕೊಟ್ಟು ತಾನೂ ವಿಷ ಕುಡಿದ ತಂದೆ| ಜ್ಯೂಸ್ ನಲ್ಲಿ ಬೆರೆಸಿ ಪ್ರಾಣ ತೆಗೆಯುವ ಸಂಚಿಗೆ ಪ್ರೇರಣೆಯಾಯ್ತು ಹೆಂಡದ ಅಮಲು

Ad Widget . Ad Widget .

ಕಡಬ:. ತಾನು ವಿಷ ಕುಡಿದು ತನ್ನ ಮಕ್ಕಳಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿದ ಘಟನೆ ಕಡಬ ತಾಲೂಕಿನ ಬಲ್ಯದಿಂದ ವರದಿಯಾಗಿದೆ

Ad Widget . Ad Widget .

ಮೂಲತಃ ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿ ವಿಶ್ವನಾಥ ಎಂಬವರು ಕಡಬ ತಾಲೂಕಿನ ಬಲ್ಯದಿಂದ ಮದುವೆಯಾಗಿದ್ದು, ಕುಡಿತದ ಚಟ ಹೊಂದಿದ್ದ ವಿಶ್ವನಾಥರು ಕುಡಿದು ಬಂದು ಪತ್ನಿಯ ಜೊತೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿಯು ತವರು ಮನೆಗೆ ಬಂದಿದ್ದು, ಇಲ್ಲಿಗೆ ಬಂದಿದ್ದ ವಿಶ್ವನಾಥ್ ತನ್ನ ಸಣ್ಣ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಜ್ಯೂಸ್ ಕುಡಿಸಿದ್ದಾನೆ ಎನ್ನಲಾಗಿದೆ. ಓರ್ವ ಮಗ ಜ್ಯೂಸ್ ಬೇಡವೆಂದು ನಿರಾಕರಿಸಿದ್ದಾನೆ. ಈ ಬಗ್ಗೆ ಪತ್ನಿ ಪ್ರಶ್ನಿಸಿದಾಗ ವಿಶ್ವನಾಥ ಜ್ಯೂಸ್‌ನಲ್ಲಿ ವಿಷ ಬೆರೆಸಿ ತಾನು ಕುಡಿದಿದ್ದಲ್ಲದೆ ಮಕ್ಕಳಿಗೂ ಕುಡಿಸಿರುವ ಬಗ್ಗೆ ತಿಳಿಸಿದ್ದಾನೆ. ಕೂಡಲೇ ಈತನ ಮಕ್ಕಳನ್ನು ಮತ್ತು ವಿಶ್ವನಾಥನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪುತ್ರನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *