Ad Widget .

ವ್ಯಕ್ತಿಯನ್ನು ಕಡಿದು ಕೊಲೆಗೈದ ದುಷ್ಕರ್ಮಿಗಳು| ವೇಣೂರಿನಲ್ಲಿ ನಡೆಯಿತು ಬರ್ಬರ ಕೃತ್ಯ|

Ad Widget . Ad Widget .

ಬೆಳ್ತಂಗಡಿ: ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.

Ad Widget . Ad Widget .

ಮೃತ ವ್ಯಕ್ತಿಯನ್ನು ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಶೆಟ್ಟಿ(60) ಎಂದು ಗುರುತಿಸಲಾಗಿದೆ.

ಸಂಜೀವ ಶೆಟ್ಟಿ ಇವರು ಇನ್ನೊಂದು ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಇವರನ್ನು ಜೊತೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಇನ್ನೋರ್ವ ಬೆಳಗ್ಗೆ ಕಾದು ಕುಳಿತರೂ ಬರದ ಕಾರಣ ಏಕೆ ಬಂದಿಲ್ಲ ಎಂದು ಅವರ ಮನೆಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವೇಣೂರು ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉನ್ನತ ಅಧಿಕಾರಿ ಎಎಸ್ ಪಿ ಶಿವಾಂಶು ರಜಪೂತ್, ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *