Ad Widget .

ಕಾನೂನು ಪದವೀಧರರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ

Ad Widget . Ad Widget .

ನವದೆಹಲಿ: ಭಾರತೀಯ ಸೇನೆಯಲ್ಲಿ ಕಾನೂನು ಪದವಿ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಹ‌ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೇನೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಕಾನೂನು ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಬೇಕು.

Ad Widget . Ad Widget .

ಒಟ್ಟು 7 ಕಾನೂನು ಪದವಿ ಉದ್ಯೋಗಗಳು ಖಾಲಿ ಇದ್ದು, ಕಾನೂನು ಪದವೀಧರರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 29ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಕ್ಟೋಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಒಟ್ಟು ಖಾಲಿ ಇರುವ 7 ಹುದ್ದೆಗಳಲ್ಲಿ ಪುರುಷರಿಗೆ 5 ಹುದ್ದೆಗಳಾದರೆ, ಮಹಿಳೆಯರಿಗೆ 2 ಹುದ್ದೆಗಳು ಖಾಲಿ ಇವೆ. ಕಾನೂನು ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಕನಿಷ್ಠ ಶೇ.55 ಅಂಕಗಳೊಂದಿಗೆ ಎಲ್​ಎಲ್​ಬಿ(ಕಾನೂನು) ಪದವಿ ಪಡೆದಿರಬೇಕು. (12ನೇ ತರಗತಿ ಬಳಿಕ 3 ವರ್ಷಗಳ ಕಾನೂನು ಪದವಿ ಓದಿರಬೇಕು).
ಅಭ್ಯರ್ಥಿಗಳು ಬಾರ್​ ಕೌನ್ಸಿಲ್​ ಆಫ್ ಇಂಡಿಯಾ/ಸ್ಟೇಟ್​ನಲ್ಲಿ ಅಡ್ವೋಕೇಟ್ಸ್​ ಆಗಿ ರಿಜಿಸ್ಟ್ರೇಶನ್ ಮಾಡಿಸಲು ಅರ್ಹತೆ ಪಡೆದಿರಬೇಕು.
ಬಾರ್​ ಕೌನ್ಸಿಲ್ ಆಫ್ ಇಂಡಿಯಾದಿಂದ ಗುರುತಿಸಲ್ಪಟ್ಟಿರುವ ಯಾವುದೇ ವಿಶ್ವವಿದ್ಯಾಲಯ/ ಕಾಲೇಜಿನಿಂದ ಪದವಿ ಪಡೆದಿರಬೇಕು.
ಅಭ್ಯರ್ಥಿಗಳು 21-27 ವರ್ಷದೊಳಗಿನವರಾಗಿರಬೇಕು.
ಆಯ್ಕೆಯಾದ ಅಭ್ಯರ್ಥಿಗೆ ಭಾರತದಾದ್ಯಂತ ಯಾವುದೇ ಸ್ಥಳದಲ್ಲಾದರೂ ಕೆಲಸಕ್ಕೆ ನಿಯೋಜಿಸಬಹುದು.ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು 56,100 ರೂ.ನಿಂದ 2,18,200 ರೂ.ವರೆಗೆ ಸಂಬಳ ಸಿಗುತ್ತದೆ.

ಆಯ್ಕೆ ಪ್ರಕ್ರಿಯೆ ಹೀಗಿರಲಿದೆ:

ಅಪ್ಲಿಕೇಶನ್​ಗಳನ್ನು ಶಾರ್ಟ್​ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಎಸ್​ಎಸ್​ಬಿ ಸಂದರ್ಶನ ಇರುತ್ತದೆ.
ಇದಾದ ನಂತರ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
ಬಳಿಕ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ.

ಕಾನೂನು ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಕಾನೂನು ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಬೇಕು. ಸೆ.29ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಮೊದಲಿಗೆ ಭಾರತೀಯ ಸೇನೆಯ ಅಧಿಕೃತ ವೆಬ್​ಸೈಟ್​​ joinindianarmy.nic.in.ಗೆ ಭೇಟಿ ನೀಡಬೇಕು.
ಬಳಿಕ ಅಲ್ಲಿ ಕಾಣ ಸಿಗುವ “Recruitment/ Career/ Advertisement menu” ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ನಂತರ ಅಲ್ಲಿ Notification of Law Graduate Job ಲಿಂಕ್​ನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಲಭ್ಯವಿರುವ ಅಧಿಕೃತ ನೋಟಿಫಿಕೇಶನ್​ನ್ನು ಡೌನ್​ಲೋಡ್ ಮಾಡಿಕೊಳ್ಳಿ.
ಡೌನ್​ಲೋಡ್ ಮಾಡಿಕೊಂಡ ನೋಟಿಫಿಕೇಶನ್​ನ್ನು ಜಾಗ್ರತೆಯಿಂದ ಓದಿ, ನಿಮ್ಮ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಿ.
ಬಳಿಕ Official Online Apply/ Registration
ಲಿಂಕ್​ಗೆ ಭೇಟಿ ನೀಡಿ.
ಸೂಕ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ.
ಕೇಳಿರುವ ಅಗತ್ಯ ದಾಖಲಾತಿಗಳನ್ನು ಅಪ್​ಲೋಡ್ ಮಾಡಿ.
ಕೊನೆಯಲ್ಲಿ ಸಲ್ಲಿಸಿರುವ ಎಲ್ಲಾ ದಾಖಲೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
ಬಳಿಕ ಅರ್ಜಿ ಶುಲ್ಕ ಪಾವತಿಸಿ.
ಕೊನೆಯಲ್ಲಿ ಅರ್ಜಿಯನ್ನು ಸಬ್​ಮಿಟ್ ಮಾಡಿ, ಪ್ರತಿಯನ್ನು ಪ್ರಿಂಟ್​ಔಟ್ ತೆಗೆದುಕೊಳ್ಳಿ.

Leave a Comment

Your email address will not be published. Required fields are marked *