Ad Widget .

ವಿಶ್ವವಿಖ್ಯಾತ ದಸರೆಗೆ ವಿದ್ಯುಕ್ತ ಚಾಲನೆ| ನಾಡಹಬ್ಬ ಉದ್ಘಾಟಿಸಿದ ಎಸ್.ಎಂ ಕೃಷ್ಣ| ಇಂದಿನಿಂದ 9 ದಿನ ಸಾಂಸ್ಕೃತಿಕ ನಗರಿಯಲ್ಲಿ ನವರಾತ್ರಿ ಸಂಭ್ರಮ

Ad Widget . Ad Widget .

ಮೈಸೂರು: 411ನೇ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ವಿಧ್ಯುಕ್ತ ಚಾಲನೆ ದೊರೆಯಿತು. ಚಾಮುಂಡಿ ಬೆಟ್ಟದಲ್ಲಿ ರಾಜಕೀಯ ಮುತ್ಸದ್ದಿ ಎಸ್‌.ಎಂ.ಕೃಷ್ಣ ಅವರು ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ವೈಭವವನ್ನು ಉದ್ಘಾಟಿಸಿದರು.

Ad Widget . Ad Widget .

ಇಂದು (ಅ.7) ಬೆಳಗ್ಗೆ 7.30ಕ್ಕೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಎಸ್​.ಎಂ. ಕೃಷ್ಣ ಅವರು 8.15 ರಿಂದ 8.45ರ ಶುಭ ಮುಹೂರ್ತದಲ್ಲಿ ನಾಡದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪತ್ನಿ ಚೆನ್ನಮ್ಮ , ಸಚಿವರಾದ ಆರ್ ಅಶೋಕ್, ಬೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಬಿಸಿ ಪಾಟೀಲ್, ಸುನಿಲ್ ಕುಮಾರ್, ಶಶಿಕಲಾ ಜೊಲ್ಲೆ, ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಜಿಟಿ ದೇವೇಗೌಡ , ತನ್ವೀರ್ ಸೇಠ್ ಮತ್ತು ಇತರರು ಉಪಸ್ಥಿತರಿದ್ದರು.

ನವರಾತ್ರಿ ಮೊದಲ ದಿನ ಅರಮಣೆಯಲ್ಲಿ ನಡೆಯುವ ಕಾರ್ಯಕ್ರಮಗಳು ಹೀಗಿವೆ. ಇಂದು ಮುಂಜಾನೆ 4.30 ರಿಂದಲೇ ಪೂಜಾ-ಕೈಂಕರ್ಯಗಳು ಆರಂಭವಾಗಿದೆ. ಬೆಳಗ್ಗೆ 6 ರಿಂದ 6.11ರ ವರೆಗೆ ದರ್ಬಾರ್ ಹಾಲ್‌ನ ಸಿಂಹಾಸನಕ್ಕೆ ಸಿಂಹದ ತಲೆ ಜೋಡಣೆ ಮಾಡಲಾಗಿದೆ. 6.30ರಿಂದ 7.30ರ ವರೆಗೆ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಕಳಶ ತರಲಾಗುವುದು. 7.45ರಿಂದ 8.55ರ ವೇಳೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್‌ಗೆ ಕಂಕಣ ಧಾರಣೆ ಮಾಡಲಾಗುತ್ತದೆ.

9 ರಿಂದ 9.30 ರವರೆಗೆ ಪಟ್ಟದ ಆನೆ, ಹಸು, ಒಂಟೆ, ಕುದುರೆಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. 11.45ರಿಂದ 12.15ರ ನಡುವೆ ಸಿಂಹಾಸನಾರೋಹಣ ಮಾಡಿ ಯದುವೀರ್​ ಖಾಸಗಿ ದರ್ಬಾರ್ ಮಾಡಲಿದ್ದಾರೆ. ಕೋವಿಡ್ ಕಾರಣದಿಂದ ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಧಾರ್ಮಿಕ ಪೂಜೆಗೂ ಕೆಲವರಿಗಷ್ಟೆ ಅವಕಾಶ ನೀಡಲಾಗಿದೆ. ಮಾಧ್ಯಮಗಳಿಗು ನಿರ್ಬಂಧ ಹೇರಲಾಗಿದೆ.

ಈ ಬಾರಿ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭ ಸೇರಿದಂತೆ ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂ ಸವಾರಿ ಕಾರ್ಯಕ್ರಮಗಳನ್ನು ಸರ್ಕಾರವೇ ಹೊರತಂದಿರುವ ವೆಬ್‌ಸೈಟ್‌, ಫೇಸ್‌ಬುಕ್‌ ಹಾಗೂ ಯೂಟ್ಯೂಬ್​ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.

ಕಾರ್ಯಕ್ರಮಗಳ ವೇಳಾಪಟ್ಟಿಯನ್ನು www.mysoredasara.gov.in ವೆಬ್‌ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಕಾರ್ಯಕ್ರಮಗಳು ನಡೆಯುವ ವೇಳೆ ನೇರಪ್ರಸಾರವನ್ನು ಮುಂದಿನ ಲಿಂಕ್‌ಗಳಲ್ಲಿ ನೀವು ನೋಡಬಹುದಾಗಿದೆ.

ಫೇಸ್​ಬುಕ್​ ಲಿಂಕ್​: https://www.facebook.com/mysorevarthe/live/

ಯೂಟ್ಯೂಬ್​ ಲಿಂಕ್​: https://tinyurl.com/mysurudasara2021

ವೆಬ್​ಸೈಟ್​ ಲಿಂಕ್​: https://mysoredasara.gov.in/

Leave a Comment

Your email address will not be published. Required fields are marked *