Ad Widget .

ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯ ಅರಣ್ಯಾಧಿಕಾರಿಗಳ ದಾಂದಲೆ| ಕೃ಼ಷಿಕನಿಗೆ ಜೀವ ಬೆದರಿಕೆ| ಮಡಿಕೇರಿ ಪೊಲೀಸರಿಂದ ಕೇಸು ದಾಖಲು|

Ad Widget . Ad Widget .

ಸುಳ್ಯ:ಅಪರೂಪದ ಪ್ರಕರಣವೊಂದರಲ್ಲಿ ತಮ್ಮ ಕಾರ್ಯ ವ್ಯಾಪ್ತಿಯ ಹೊರತಾದ ಪ್ರದೇಶಕ್ಕೆ ದಾಳಿ ನಡೆಸಿ ಅಕ್ರಮ ಕೃಷಿ ಚಟುವಟಿಕೆ ನಡೆಸಿರುವುದೆಂದು ಆರೋಪಿಸಿ ಕಾನೂನು ಬಾಹಿರವಾಗಿ ಕಡಿದು ನಾಶಗೊಳಿಸಿದ ಅರಣ್ಯಾಧಿಕಾರಿ ಸಹಿತ ನಾಲ್ವರ ವಿರುದ್ದ ಪೊಲೀಸ್ ಕೇಸು ದಾಖಲಾದ ಘಟನೆ ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಸುಳ್ಯ ಫಾರೆಸ್ಟರ್ ಚಂದ್ರ ಶೇಖರ ( ಚಂದ್ರು), ಗಾರ್ಡ್ ಚಿದಾನಂದ ಹಾಗು ಅರಣ್ಯವೀಕ್ಷಕರಾದ ಸುಂದರ ಕೆ.ಮತ್ತು ಮನೋಜ್ ವಿರುದ್ದ ಮಡಿಕೇರಿ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ: ಕಳೆದೊಂದು ವರ್ಷದ ಹಿಂದೆ ಮಡಿಕೇರಿ ತಾಲೂಕು ಚೆಂಬು ಗ್ರಾಮದ ಸಿ.ಆರ್.ಪುರುಷೋತ್ತಮ ಎಂಬವರು ಸುಮಾರು 2.45 ಎಕ್ರೆ ಜಾಗದಲ್ಲಿ ಅಡಿಕೆ, ಕಾಫಿ, ಕರಿಮೆಣಸು, ಗೇರು ಕೃಷಿ ಕೈಗೊಂಡಿದ್ದರು, ಇದು ಮಡಿಕೇರಿ ತಾಲೂಕಿನ ಕಂದಾಯ ವ್ಯಾಪ್ತಿ ಯಾಗಿದ್ದು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅಕ್ರಮ ಪ್ರ ವೇಶ ನಡೆಸಿದ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಅರಣ್ಯ ಇಲಾಖಾ ಜಾಗದಲ್ಲಿ ಕೃಷಿ ನಡೆಸಿರುವುದಾಗಿ ಆರೋಪಿಸಿ 2020 ಜುಲೈ 18 ರಂದು ಕೃಷಿ ನಾಶಗೊಳಿಸಿದ್ದಲ್ಲದೇ ಈ ಬಗ್ಗೆ ಪ್ರಶ್ನಿಸಿದ ಪುರು಼ಷೋತ್ತಮ ಅವರ ಅಣ್ಣ ವಾಸುದೇವ ಅವರಿಗೆ ಅಧಿಕಾರಿಗಳು ಜೀವಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಜಂಟಿ ಜಾಗ ಸರ್ವೇ ನಡೆಸಿದಾಗ ಸದ್ರಿ ಸ್ಥಳ ಅರಣ್ಯ ಅಧಿಕಾರಿಯ ಗಸ್ತು ವ್ಯಾಪ್ತಿಯಿಂದ ಹೊರಗಿದ್ದು ಸುಳ್ಯ ಬದಲಾಗಿ ಮಡಿಕೇರಿ ವ್ಯಾಪ್ತಿಯದ್ದೆಂದು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ನಿಯಮಬಾಹಿರ ನಡೆಯನ್ನು ಪುಷ್ಟಿಕರಿಸಿತ್ತು. ಅದರಂತೆ ಮಡಿಕೇರಿ ಗ್ರಾಮಾಂತರ ಪೋಲೀಸರು ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಇದೀಗ ಕೊಲೆ ಬೆದರಿಕೆ, ಕೃಷಿನಾಶ ಮತ್ತಿತರ ಕಲಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *