Ad Widget .

ಅಶ್ಲೀಲ ವರ್ತನೆ ತೋರಿದ ಯುವಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಭಜರಂಗದಳ ಕಾರ್ಯಕರ್ತರು ಕೋಲು ಕೊಟ್ಟು ಪೆಟ್ಟು ತಿಂದರು..!

Ad Widget . Ad Widget .

ಮಂಗಳೂರು: ನಗರದಲ್ಲಿ ನೈತಿಕ ಪೋಲಿಸ್ ಗಿರಿ ಹೆಚ್ಚಾಗುತ್ತಿದೆ ಎಂಬ ಆರೋಪದ ನಡುವೆಯೇ ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಗಳಿಗೆ ಬುದ್ದಿವಾದ ಹೇಳಲು ಹೋದ ಇಬ್ಬರು ಭಜರಂಗದಳ ಕಾರ್ಯಕರ್ತರನ್ನೇ ಪೋಲಿಸರು ಬಂಧಿಸಿರುವ ಘಟನೆ ನಡೆದಿದೆ‌.

Ad Widget . Ad Widget .

ಕದ್ರಿ ಠಾಣಾ ವ್ಯಾಪ್ತಿಯ ಸೈಂಟ್ ಆಗ್ನೆಸ್ ಬಳಿ ರಾತ್ರಿ ವೇಳೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಜೋಡಿಗಳನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು ಬುದ್ದಿವಾದ ಹೇಳಿ ಪೋಲೀಸರಿಗೆ ಒಪ್ಪಿಸಿದ್ದರು.

ಆದರೆ ಜೋಡಿಗಳ ಜೊತೆ ಪೋಲೀಸ್ ಸ್ಟೇಷನ್ ಗೆ ತೆರಳಿದ ಕಾರ್ಯಕರ್ತರ ವಿರುದ್ಧವೇ ಆ ಜೋಡಿ ತಿರುಗಿಬಿದ್ದಿದ್ದು, ಬಜರಂಗದಳದ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆ ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ನಿನ್ನೆ ರಾತ್ರಿಯೇ ಬಂಧಿಸಿದ್ದಾರೆ. ಜಯಪ್ರಕಾಶ್, ಪೃಥ್ವಿ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿ ಅಸಭ್ಯವಾಗಿ ವರ್ತಿಸುತ್ತಿದ್ದ ಜೋಡಿಯನ್ನು ನಾವು ಪೋಲಿಸರಿಗೆ ಒಪ್ಪಿಸಿದರೂ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಎಂದು ಪೋಲಿಸರ ಮೇಲೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕಾರ್ಯಕರ್ತರ ಒಳ್ಳೆಯ ಕೆಲಸವನ್ನು ಗಮನಿಸಿದೇ ಪೊಲೀಸರು ಕೇಸು ದಾಖಲಿಸಿದ್ದು, ಕೋಲು ಕೊಟ್ಟು ಪೆಟ್ಟು ತಿಂದಂತಾಗಿದೆ.

Leave a Comment

Your email address will not be published. Required fields are marked *