Ad Widget .

ಬಿಗಿಯಾದ ಜಿನ್ಸ್ ಧರಿಸ್ತಿರಾ? ಹಾಗಿದ್ರೆ ಈ ಕಥೆ ಓದ್ಲೇ ಬೇಕು. ಟೈಟ್ ಫಿಟ್ ಹಾಕಿದ ಆಕೆಗೆ ಏನಾಯ್ತು‌ ಗೊತ್ತಾ?

ನ್ಯೂಸ್ ಡೆಸ್ಕ್: ಇಂದಿನ ದಿನಗಳಲ್ಲಿ ಜೀನ್ಸ್ ಧರಿಸುವುದು ಈಗ ಸಾಮಾನ್ಯ ಸಂಗತಿ. ಪುರುಷರಿಂದ ಹಿಡಿದು ಹುಡುಗಿಯರು, ಮಹಿಳೆಯರು ಎಲ್ಲರೂ ಜೀನ್ಸ್ ಧರಿಸುತ್ತಾರೆ. ಆದ್ರೆ ಬಿಗಿಯಾದ ಜೀನ್ಸ್, ಹುಡುಗಿಯೊಬ್ಬಳು ಆಸ್ಪತ್ರೆ ಸೇರುವಂತೆ ಮಾಡಿದೆ. ಬಿಗಿಯಾದ ಹಾಫ್ ಜೀನ್ಸ್ ಧರಿಸಿದ್ದ ಹುಡುಗಿ ತನ್ನ ಸಮಸ್ಯೆಯನ್ನು ಹಂಚಿಕೊಂಡಿದ್ದಾಳೆ.

Ad Widget . Ad Widget .

ಅಂದ ಹಾಗೆ ಘಟನೆ ನಡೆದಿರುವುದು ಉತ್ತರ ಕೆರೊಲಿನಾದಲ್ಲಿ. ಹುಡುಗಿ ಸ್ಯಾಮ್, ಸಾಮಾಜಿಕ ಜಾಲತಾಣದಲ್ಲಿ ತಾನು ಎದುರಿಸಿದ ಸಮಸ್ಯೆಯನ್ನು ಹಂಚಿಕೊಂಡಿದ್ದಾಳೆ. ಟಿಕ್ ಟಾಕ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾಳೆ. ಇದನ್ನು 80 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

Ad Widget . Ad Widget .

ಸ್ಯಾಮ್, ಟೈಟ್ ಜೀನ್ಸ್ ಸ್ಕರ್ಟ್ ಧರಿಸುತ್ತಿದ್ದಳಂತೆ. ಇದ್ರಿಂದ ಆಕೆಗೆ ಚರ್ಮದ ಸೋಂಕು ತಗುಲಿದೆ. ಸಮಸ್ಯೆ ಎಷ್ಟು ಹೆಚ್ಚಾಗಿತ್ತೆಂದ್ರೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯ್ತಂತೆ. ಒಂದು ಹಂತದಲ್ಲಿ ಐಸಿಯುಗೆ ಹೋಗಿ ಬಂದಿದ್ದಳಂತೆ.

ಬಾಯ್ ಫ್ರೆಂಡ್ ಜೊತೆ ಡೇಟ್ಸ್ ಗೆ ಹೋದವಳು ಟೈಟ್ ಜೀನ್ಸ್ ಧರಿಸಿದ್ದಳಂತೆ. ಸುಮಾರು 8 ಗಂಟೆಗಳ ಕಾಲ ಅದನ್ನು ಧರಿಸಿದ್ದವಳಿಗೆ ಸೊಂಟದ ಕೆಳಗೆ ನೋವು ಕಾಣಿಸಿತ್ತಂತೆ. ವೈದ್ಯರ ಬಳಿ ಹೋದಾಗ, ಚರ್ಮದ ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ದರಂತೆ.

ಆಕೆಗೆ ಸೆಪ್ಸಿಸ್ ಮತ್ತು ಸೆಲ್ಯುಲೈಟಿಸ್ ಆಗಿತ್ತಂತೆ. ಆಸ್ಪತ್ರೆಯಲ್ಲಿ ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದರಂತೆ. ಆದ್ರೆ ಪರಿಸ್ಥಿತಿ ಕೈ ಮೀರ್ತಿದೆ ಎಂಬುದು ಗೊತ್ತಾಗ್ತಿದ್ದಂತೆ ಆಕೆಯನ್ನು ಐಸಿಯುಗೆ ದಾಖಲಿಸಲಾಗಿತ್ತಂತೆ. 6 ದಿನಗಳ ನಂತ್ರ ಸ್ಯಾಮ್ ಸುಧಾರಿಸಿಕೊಂಡಿದ್ದಳಂತೆ. ಸೋ, ನೀವು ಕೂಡಾ ಬಿಗಿಯಾದ ಜೀನ್ಸ್ ಹಾಕ್ತಾ ಇದ್ರೆ ಇನ್ಮುಂದೆ ಆಲೋಚನೆ ಮಾಡ್ಲೇಬೇಕು. ಇಲ್ಲಾಂದ್ರೆ ಕಥೆ ಬೇರೇನೆ ಆಗ್ಬಹುದು ಜೋಕೆ.

Leave a Comment

Your email address will not be published. Required fields are marked *