Ad Widget .

ನೀಲಿಚಿತ್ರ ನೋಡ್ತೀರಾ? ಹಾಗಾದ್ರೇ ನಿಮ್ಗೆ ಅದಕ್ಕೆ ‌ಪ್ರಾಬ್ಲಂ ಆಗುತ್ತಂತೆ..! ಅಧ್ಯಯನ ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ.

Ad Widget . Ad Widget .

ಡಿಜಿಟಲ್ ಡೆಸ್ಕ್ : ಕಡಿಮೆ ಖರ್ಚಿನಲ್ಲಿ ಸಿಗುತ್ತಿರುವ ಇಂಟರ್ನೆಟ್​ ಸೌಕರ್ಯ ಹಾಗೂ ವೆಬ್​ ಸಂಪರ್ಕಗಳಿಂದಾಗಿ ಯುವಜನತೆ ನೀಲಿಚಿತ್ರ ಹಾಗೂ ವಿಡಿಯೋಗಳನ್ನು ನೋಡುವುದು ಸುಲಭದ ಕೆಲಸವಾಗಿದೆ. ನೀಲಿ ಚಿತ್ರಗಳ ವೀಕ್ಷಣೆಯು ನಿಮ್ಮ ಸಂಬಂಧಗಳನ್ನು ಹಾಳು ಮಾಡುವುದು ಮಾತ್ರವಲ್ಲದೇ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

Ad Widget . Ad Widget .

ನೀಲಿ ಚಿತ್ರಗಳನ್ನು ನಿರಂತರವಾಗಿ ನೋಡುವ ಜನರು ತಮ್ಮ ಲೈಂಗಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಅಧ್ಯಯನದ ಪ್ರಕಾರ ಅಶ್ಲೀಲ ಸಿನಿಮಾಗಳನ್ನು ವೀಕ್ಷಣೆ ಮಾಡುವ ಪುರುಷರು ತಮ್ಮ ಲೈಂಗಿಕ ಜೀವನದಲ್ಲಿ ತೃಪ್ತಿ ಹೊಂದುವ ಸಾಧ್ಯತೆಗಳು ತುಂಬಾನೇ ಕಡಿಮೆ ಎಂದು ತಿಳಿದು ಬಂದಿದೆ.

ನೀಲಿ ಚಿತ್ರಗಳನ್ನು ಸಾಮಾನ್ಯವಾಗಿ ಕದ್ದು ಮುಚ್ಚಿ ನೋಡುವವರೇ ಹೆಚ್ಚು. ಮರೆಯಲ್ಲಿ ಮಾಡುವ ಯಾವುದೇ ಕೆಲಸಗಳು ಮನುಷ್ಯನಿಗೆ ಮುಜುಗರವನ್ನುಂಟು ಮಾಡುತ್ತದೆ. ಪುರುಷರಿರಲಿ ಅಥವಾ ಮಹಿಳೆಯರೇ ಇರಲಿ ಅದರಲ್ಲೂ ವಿಶೇಷವಾಗಿ ಯುವಜನತೆ ನೀಲಿ ಚಿತ್ರವನ್ನು ನೋಡುವ ಅಭ್ಯಾಸವನ್ನು ಹೆಚ್ಚು ಮಾಡಿಕೊಂಡಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಮುಜುಗರವನ್ನು ಅನುಭವಿಸುತ್ತಾರೆ.

ಇದು ಮಾತ್ರವಲ್ಲದೇ ನೀಲಿ ಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುವವರು ಸಾಮಾನ್ಯವಾಗಿ ಆರ್ಥಿಕ ಸಂಕಷ್ಟ, ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಅಥವಾ ಉದ್ಯೋಗ ಸಂಬಂಧಿ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ.

ನೀಲಿ ಚಿತ್ರಗಳು ಲೈಂಗಿಕ ಜೀವನದಲ್ಲಿ ಅಶ್ಲೀಲ ವಿಚಾರಗಳನ್ನು ಹುಟ್ಟು ಹಾಕುತ್ತದೆ. ಅಲ್ಲದೇ ಪುರುಷರಿಗೆ ಮಹಿಳೆಯರ ಮೇಲೆ ಕೆಟ್ಟ ಭಾವನೆಗಳನ್ನು ಹುಟ್ಟು ಹಾಕುತ್ತದೆ. ಇದರಿಂದ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಎಸಗುವಂತ ಕೆಟ್ಟ ಆಲೋಚನೆಗಳು ಹುಟ್ಟಿಕೊಳ್ಳುತ್ತದೆ. ನೀಲಿ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಂಡೋಮ್​ಗಳ ಬಳಕೆಯನ್ನು ತೋರಿಸಲಾಗುವುದಿಲ್ಲ. ಇದು ಕೂಡ ಒಂದು ಗಂಭೀರ ವಿಚಾರವಾಗಿದೆ. ಆದ್ದರಿಂದ ಈ ವಿಚಾರದಲ್ಲಿ ಯುವಜನತೆ ಗಂಭೀರವಾದ ಆಲೋಚನೆ ‌ಮಾಡಬೇಕಿದೆ.

Leave a Comment

Your email address will not be published. Required fields are marked *