Ad Widget .

ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಚೈತ್ರಾ ಕುಂದಾಪುರ ವಿಡಿಯೋಗೆ ಅಶ್ಲೀಲ ವಾಯ್ಸ್| ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಕೀಳು ಮಟ್ಟದ ಅವಮಾನ ಮಾಡಿ ಪೋಸ್ಟಿಂಗ್| ಕೋಮು ಸಾಮರಸ್ಯ ಕದಡುತ್ತಿರುವವರಾರು?

ಮಂಗಳೂರು: ಚೈತ್ರಾ ಕುಂದಾಪುರ ಹಾಗೂ ತುಳುವರ ಆರಾಧ್ಯ ದೈವ ಕೊರಗಜ್ಜನನ್ನು ತೀರಾ ತುಚ್ಚ ರೀತಿಯಲ್ಲಿ, ಅಶ್ಲೀಲವಾಗಿ ನಿಂದಿಸುವ ಮೂಲಕ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಅವಮಾನ ಮಾಡಲಾಗಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆಯಲ್ಲದೆ ಆಕ್ರೋಶ ವ್ಯಕ್ತವಾಗಿದೆ.

Ad Widget . Ad Widget .

ಟಾರ್ಗೆಟ್ ಹಿಂದೂಸ್’ ಎಂಬ ಪ್ರೊಫೈಲ್ ಫೋಟೋ ಇಟ್ಟುsula-tuluver’ ಎಂಬ ಹೆಸರಲ್ಲಿ ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆಯಲಾಗಿದ್ದು, ಇದರ ಡಿಸ್ಕ್ರಿಪ್ಷನ್‍ನಲ್ಲಿ ತುಳು ಅಪ್ಪೆ ಹಾಗೂ ಕೊರಗಜ್ಜನಿಗೆ ತೀರಾ ತುಚ್ಚ ರೀತಿಯಲ್ಲಿ ನಿಂದಿಸಲಾಗಿದೆ. ಅಲ್ಲದೆ ಮೊನ್ನೆ ಸುರತ್ಕಲ್‍ನಲ್ಲಿ ಭಾಷಣ ಮಾಡಿದ್ದ ಚೈತ್ರಾ ಕುಂದಾಪುರ ಅವರ ಭಾಷಣದ ವಿಡಿಯೋದ ಆಡಿಯೋವನ್ನು ಮ್ಯೂಟ್ ಮಾಡಿಕೊಂಡು ಅದರ ಬದಲಿಗೆ ಬ್ಯಾರಿ ಭಾಷೆಯಲ್ಲಿ ಅಶ್ಲೀಲದ ಆಡಿಯೋ ಅಟ್ಯಾಚ್ ಮಾಡಿ ನಿಂದಿಸಲಾಗಿದೆ. ಶಿವಾಜಿ ಮಹಾರಾಜರ ಫೋಟೋವನ್ನಿಟ್ಟುಕೊಂಡು ಅವರಿಗೂ ಅವಮಾನ ಮಾಡಲಾಗಿದ್ದಲ್ಲದೆ ನಾಯಿಯೊಂದು ಅವರ ಮುಖಕ್ಕೆ ಮೂತ್ರ ಮಾಡುವಂತೆ ಚಿತ್ರಿಸಲಾಗಿದೆ. ಅದಲ್ಲದೆ ಪ್ರಮೋದ್ ಮುತಾಲಿಕರ ಭಾಷಣದ ಮಾಡಿದ ನ್ಯೂಸ್‍ನ ಸ್ಕ್ರೀನ್ ಶಾಟ್ ಬಳಸಿಕೊಂಡು ಅವರನ್ನೂ ನಿಂದಿಸಲಾಗಿದೆ.
ಇದು ವಿವಾದಕ್ಕೆ ಕಾರಣವಾಗಿದ್ದು, ಜಿಲ್ಲೆಯ ಜನತೆಯ ಕೋಮು ಸೌಹಾರ್ದತೆಯನ್ನು ಕೆಡಿಸುವ ಹುನ್ನಾರ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಸಿದ ದುಷ್ಕರ್ಮಿಗಳ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹ ಕೇಳಿಬಂದಿದೆ.

Ad Widget . Ad Widget .

ಇನ್ಸ್ಟಾಗ್ರಾಂ ಪೇಜ್ ಲಿಂಕ್ ಇಲ್ಲಿದೆ

https://instagram.com/sula_tuluver?utm_medium=copy_link

Leave a Comment

Your email address will not be published. Required fields are marked *