Ad Widget .

ನಿದ್ದೆ ಮಾಡುವುದಾಗಿ ರೂಮ್ ಬಾಗಿಲು ಹಾಕಿಕೊಂಡ ಬಾಲಕಿ ಮತ್ತೆ ಸಿಕ್ಕುದ್ದು ಶವವಾಗಿ..!, ಈ ಸಾವಿಗೆ ಕಾರಣವಾದನೇ ಆಕೆಯ ಅಪ್ಪ?

Ad Widget . Ad Widget .

ಹೈದರಾಬಾದ್: ನಿದ್ದೆ ಮಾಡುವುದಾಗಿ ರೂಮ್ ಬಾಗಿಲು ಹಾಕಿಕೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ತೆಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಬಾಳಾಪುರ್ ಮೂಲದ ವೇಲದುರ್ತಿ ಮನೋಹರಚಾರಿ ಮತ್ತು ಕಲ್ಯಾಣ ದಂಪತಿ ಮಗಳಾಗಿದ ಕೌಶಿಕಿ (17) ಮೃತ ಬಾಲಕಿಯಾಗಿದ್ದಾಳೆ. ಇವರ ಕುಟುಂಬ ಮೀರ್‌ಪೇಟ್ ನ ಸರ್ವೋದಯ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸವಾಗಿದ್ದರು.

ಕೌಶಿಕಿ ದ್ವೀತಿಯ ಪಿಯು ವಿದ್ಯಾರ್ಥಿನಿ ಆಗಿದ್ದಳು. ಮೊಬೈಲ್ ಗೀಳಿಗೆ ಬಿದ್ದಿದ್ದ ಕೌಶಿಕಿ ಅಪ್ಪನ ಮೊಬೈಲ್ ತೆಗೆದುಕೊಂಡು ಪ್ರತಿದಿನ ಗೇಮ್ ಆಡುತ್ತಿದ್ದಳು. ಗೇಮ್ ಆಡುತ್ತಿರುವಾಗ ಒಂದು ದಿನ ರಾತ್ರಿ ಕೌಶಿಕಿ ತಂದೆ ಆಕೆಯನ್ನು ಬೈದು ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಆಕೆ ತೀರ್ವ ಮನನೊಂದಿದ್ದಳು.

ಬಳಿಕ ಕೌಶಿಕಿ ಅದೇ ದಿನ ರಾತ್ರಿ ಮಲಗುವುದಾಗಿ ಹೇಳಿ ಬೆಡ್‍ರೂಮ್‍ಗೆ ಹೋಗಿ ಲಾಕ್ ಮಾಡಿಕೊಂಡಿದ್ದಳು. ಅದೇ ಕೋಣೆಯಲ್ಲಿ ಆಕೆಯ ಸಹೋದರಿ ಕೂಡಾ ಮಲಗಿದ್ದಳು. ಆದರೆ ಈ ನಡುವೆ ತಾಯಿ ಕಿಟಕಿ ಬಾಗಿಲು ತಟ್ಟಿದ್ದಾರೆ. ಕೌಶಿಕಿ ಸಹೋದರಿ ಎಚ್ಚರಗೊಂಡು ನೋಡಿದಾಗ ಅಕ್ಕ ದುಪ್ಪಟ್ಟಿದಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಜೋರಾಗಿ ಕಿರುಚಿದ್ದಾಳೆ.

ತಕ್ಷಣ ಕೌಶಿಕಿಯನ್ನು ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೌಶಿಕಿ ಸಾವನ್ನಪ್ಪಿದ್ದಾಳೆ. ಸದಯ ಈ ಪ್ರಕರಣ ಮೀರ್‍ಪೇಟ್ ಠಾಣೆಯಲ್ಲಿ ದಾಖಲಾಗಿದೆ.

ಇನ್ನೂ ಈಕೆ ಸಾವಿಗೆ ಅಪ್ಪ ಬೈದಿರುದೇ ಕಾರಣ, ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಬುದ್ದಿವಾದ ಹೇಳಿ, ಮೊಬೈಲ್ ನಿಂದ ಆಗುವ ಅನಾಹುತಗಳನ್ನು ಆಕೆಗೆ ಮನವರಿಕೆ ಮಾಡಬಹುದಿತ್ತು. ಈ ರೀತಿ ಒಮ್ಮೆಲೇ ಆಕೆಯ ಮೇಲೆ ಎರಗುವುದು ಸರಿಯಲ್ಲ ಎನ್ನುವ ಗಾಳಿ ಸುದ್ದಿಗಳು ಕೇಳಿಬರುತ್ತಿದೆ.

Leave a Comment

Your email address will not be published. Required fields are marked *