Ad Widget .

ವಿದ್ಯಾರ್ಥಿನಿಯನ್ನು ಐ ಲವ್ ಯೂ ಎಂದು ಅಪ್ಪಿಕೊಳ್ಳಲು ಬಂದ ಕಾಮುಕ| ಕೈಹಿಡಿದೆಳೆದವನ ಖಾಕಿ ಕೈಗಿತ್ತ ಗ್ರಾಮಸ್ಥರು|

Ad Widget . Ad Widget .

ಮಂಗಳೂರು: ವಿದ್ಯಾರ್ಥಿನಿಯೋರ್ವಳು‌ ಕಾಲೇಜು ಮುಗಿಸಿ ಬಸ್ಸಿನಿಂದಿಳಿದು‌ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಗ್ರಾಮಸ್ಥರು ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ಮಂಗಳೂರಿ‌ನ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂದಿತ ಆರೋಪಿಯನ್ನು ಅಡ್ಯಾರ್ ಕಣ್ಣೂರು‌ ನಿವಾಸಿ ಯಾಕೂಬ್ ಎಂದು ಗುರುತಿಸಲಾಗಿದೆ.

Ad Widget . Ad Widget .

ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹರೇಕಳ ಎಂಬಲ್ಲಿ ಬಸ್ಸಿನಿಂದ ಇಳಿದು ಮನೆಗೆ ತೆರಳುತ್ತಿದ್ದಳು. ಈ ವೇಳೆ ಆಕೆಗೆ ಎದುರಾದ ಯಾಕೂಬ್ ‘ಐ ಲವ್ ಯೂ’ ಎಂದು ಆಕೆಯ ಮೇಲೆ ಮುಗಿ ಬಿದ್ದಿದ್ದಾನೆ. ಆಕೆಯನ್ನು ತಬ್ಬಿಕೊಳ್ಳಲು ಆತ ಯತ್ನಿಸಿದ್ದು, ಆಕೆ ಆತನ ಕೈಯಿಂದ ತಪ್ಪಿಸಿ ಓಡಿದ್ದಾಳೆ.

ಆದರೆ ಕಾಮಾಂಧನಾದ ಯಾಕೂಬ್‌ ಮತ್ತೆ ಪೊದೆಗಳ ಮದ್ಯೆ ಅಡಗಿ ಕುಳಿತು ಆಕೆಯನ್ನು ಅಶ್ಲೀಲ ಸನ್ನೆಯಿಂದ ಕರೆದದ್ದಾಗಿಯೂ, ಈತನ ಅವಸ್ಥೆ ನೋಡಿ ಹುಡುಗಿ ಬೊಬ್ಬೆ ಹೊಡೆದಿದ್ದಾಳೆ. ಆಕೆಯ ಅರಚಾಟ ಕೇಳಿದ ಗ್ರಾಮಸ್ಥರು, ಆರೋಪಿಯನ್ನು ಹಿಡಿಯಲು ಯತ್ನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಆರೋಪಿಯನ್ನು ಹಿಡಿದ ಗ್ರಾಮಸ್ಥರು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ‌ ಆರೋಪಿ ಪೊಲೀಸ್ ವಶದಲ್ಲಿದ್ದು, ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *