ಬೆಂಗಳೂರು: ಇನ್ನು ಮುಂದಿನ ದಿನಗಳಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪ್ರತೀ ಕೀಲೋಮೀಟರಿಗೆ 30 ರೂ. ಹೆಚ್ಚಿಸಲು ನಿರ್ಧರಿಸಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಹೆಚ್ಚುವರಿ ಸಾರಿಗೆ ಆಯುಕ್ತರಾಗಿರುವ ಎಂ. ಎಲ್. ನರೇಂದ್ರ ಹೋಲ್ಕರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಮೊದಲ 1.8 ಕಿಲೋಮೀಟರ್ ನಂತರದ ಪ್ರತಿ ಕಿಲೋಮೀಟರ್‌ಗೆ, 15 ರೂಪಾಯಿ ಆಗಿರುತ್ತದೆ ಎಂದು ಹೇಳಿದ್ದಾರೆ. ಸರ್ಕಾರದಿಂದ ಅಧಿಕೃತ ಅಧಿಸೂಚನೆ ಬರುವುದು ಬಾಕಿ ಇದೆ ಎಂದು ನರೇಂದ್ರ ಹೋಲ್ಕರ್ ಹೇಳಿದ್ದು, ಮತ್ತು ಹೆಚ್ಚಿಸಲಾದ ಶುಲ್ಕವನ್ನು ಯಾವಾಗ ಜಾರಿಗೆ ತರಲಾಗುವುದು ಎಂಬುದು ಖಚಿತವಾಗಿಲ್ಲ ಎಂದು ಹೇಳಿದರು.
ಆಟೋರಿಕ್ಷಾ ದರ ಹೆಚ್ಚಳ ಮಾಡುವಂತೆ ಬೆಂಗಳೂರಿನ ಆಟೋರಿಕ್ಷಾ ಚಾಲಕರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಪ್ರಸ್ತುತವಾಗಿ ಪ್ರಯಾಣದ ಮೊದಲ 1.8 ಕಿಲೋ ಮೀಟರ್‌ಗೆ 25 ರೂಪಾಯಿ ಮತ್ತು ನಂತರದ ಪ್ರತಿ ಕಿಲೋಮೀಟರ್ ಗೆ ಹೆಚ್ಚುವರಿ 13 ರೂಪಾಯಿ ಇರುವ ದರವನ್ನು ಚಾಲಕರು 1.8 ಕಿಲೋ ಮೀಟರ್‌ಗೆ ಕನಿಷ್ಠ ಶುಲ್ಕವಾಗಿ 30 ರೂಪಾಯಿ ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 16 ರೂಪಾಯಿಗೆ ದರ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದರು.
ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ ಆಟೋರಿಕ್ಷಾ ಚಾಲಕರ ಒಕ್ಕೂಟದ (ಎಆರ್‌ಡಿಯು) ಬೆಂಗಳೂರು, ಪ್ರಧಾನ ಕಾರ್ಯದರ್ಶಿಯಾದ ಸಿ. ಎನ್. ಶ್ರೀನಿವಾಸ್ ಅವರು “ಈಗ ಒಟ್ಟಾರೆ ಅಡುಗೆ ಅನಿಲ, ವಿದ್ಯುತ್, ದಿನಸಿ, ಮಕ್ಕಳ ಶಿಕ್ಷಣ ಇತ್ಯಾದಿಗಳ ಬೆಲೆಗಳು ಸಹ ಏರಿಕೆಯಾಗಿವೆ. ಇದರಿಂದಾಗಿ ನಾವು ನಷ್ಟ ಎದುರಿಸುತ್ತಿದ್ದೇವೆ. ಆದ್ದರಿಂದ ಹೆಚ್ಚಿದ ಬೆಲೆಗಳನ್ನು ಪರಿಗಣಿಸಿ ಸರ್ಕಾರವು ಆಟೋರಿಕ್ಷಾ ದರವನ್ನು ಸಹ ಹೆಚ್ಚಿಸಬೇಕೆಂದು ನಾವು ಒತ್ತಾಯಿಸಿದ್ದೇವೆ. ಎರಡು ವರ್ಷಗಳ ಹಿಂದೆಯೂ ದರಗಳನ್ನು ಹೆಚ್ಚಿಸುವಂತೆ ನಾವು ಸರ್ಕಾರವನ್ನು ವಿನಂತಿಸಿದ್ದೇವೆ. ಈಗ, ದರಗಳನ್ನು ಪರಿಷ್ಕರಿಸಿ ಎಂಟು ವರ್ಷಗಳು ಕಳೆದಿವೆ” ಎಂದು ಹೇಳಿದರು.